alex Certify ಫಸ್ಟ್ ನೈಟ್ ದಿನವೇ ಪತಿಯ ಅವತಾರಕ್ಕೆ ಶಾಕ್ ಆದ ಪತ್ನಿ: ಮೊದಲ ದಿನವೇ ಬಯಲಾಯ್ತು ಗಂಡನ ಅಸಲಿ ಮುಖ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಸ್ಟ್ ನೈಟ್ ದಿನವೇ ಪತಿಯ ಅವತಾರಕ್ಕೆ ಶಾಕ್ ಆದ ಪತ್ನಿ: ಮೊದಲ ದಿನವೇ ಬಯಲಾಯ್ತು ಗಂಡನ ಅಸಲಿ ಮುಖ

ಬೆಂಗಳೂರು: ಮೊದಲ ಮದುವೆಯನ್ನು ಮುಚ್ಚಿಟ್ಟು ಮತ್ತೊಂದು ಮದುವೆಯಾದ ಭೂಪನ ನಿಜ ಸ್ವರೂಪ ಪತ್ನಿಗೆ ಮೊದಲ ರಾತ್ರಿಯೇ ಬಹಿರಂಗವಾಗಿದ್ದು, ಮದುವೆಯಾದ ಒಂದೇ ತಿಂಗಳಲ್ಲಿ ದಾಂಪತ್ಯ ಜೀವನ ಮುರಿದು ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಾವಿರ ಕನಸು ಕಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿ, ಮೊದಲ ರಾತ್ರಿಯೇ ಪತಿಯ ಅವತಾರ ನೋಡಿ ಶಾಕ್ ಆಗಿದ್ದಾಳೆ. ಫಸ್ಟ್ ನೈಟ್ ದಿನವೇ ಪತಿರಾಯ ಕಂಠಪೂರ್ತಿ ಕುಡಿದು ಬಂದಿದ್ದಾನೆ. ಇದರಿಂದ ಬೇಸತ್ತ ಯುವತಿ ಫಸ್ಟ್ ನೈಟ್ ಕ್ಯಾನ್ಸಲ್ ಮಾಡಿಸಿದ್ದಾಳೆ. ಎರಡನೇ ದಿನ ರಾತ್ರಿ ನಡೆದ ಫಸ್ಟ್ ನೈಟ್ ಗೂ ಪತಿ ಮಹಾಶಯ ಕುಡಿದು ಬಂದಿದ್ದಾನೆ. ಇದರಿಂದ ಪತಿ-ಪತ್ನಿ ನಡುವೆ ರಂಪಾಟವಾಗಿದೆ. ಕೋಪಗೊಂಡ ಪತಿ, ಪತ್ನಿಯನ್ನು ಥಳಿಸಿದ್ದಾನೆ. ಇದೇ ವೇಳೆ ಆತನಿಗೆ ಅದಾಗಲೇ ವಿವಾಹವಾಗಿದ್ದ ವಿಚಾರವೂ ಗೊತ್ತಾಗಿದೆ. ಇದರಿಂದ ಆಘಾತಕ್ಕೊಳಗಾದ ಪತ್ನಿ ರಾದ್ದಾಂತ ಮಾಡಿದ್ದಾಳೆ.

ಮೊದಲ ಮದುವೆಯ ವಿಷಯ ಮುಚ್ಚಿಟ್ಟಿದ್ದೂ ಅಲ್ಲದೇ, ಫಸ್ಟ್ ನೈಟ್ ದಿನವೇ ಕುಡಿದು ಥಳಿಸಿ ಹಿಂಸೆ ಕೊಟ್ಟಿದ್ದಾನೆ. ಒಂದು ತಿಂಗಳ ಕಾಲ ಪತಿಯ ಮನೆಯವರೂ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿರುವ ಪತ್ನಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅಕ್ಟೋಬರ್ 29ರಂದು ಆದ ಮದುವೆ ನವೆಂಬರ್ 29ಕ್ಕೆ ಅಂತ್ಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...