ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಗುಜರಾತ್ ಮಾದರಿಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ.
ಇವರಿಗೆ ನದಿ ತಟ, ಸಮುದ್ರ ತೀರದಲ್ಲಿ ಯಾವುದಾದರೊಂದು ಯೋಜನೆ ಕೈಗೊಳ್ಳಬೇಕಾದರೆ ಹಲವು ಅಧಿಕಾರಿಗಳ ಅನುಮತಿ ಬೇಕಾಗುತ್ತಿತ್ತು. ಹೀಗಾಗಿ ಹೂಡಿಕೆದಾರರು ತಮ್ಮ ಬಹುತೇಕ ಸಮಯವನ್ನು ಕಚೇರಿಗೆ ಅಲೆಯುವುದರಲ್ಲೇ ಕಳೆದುಹೋಗುತ್ತಿತ್ತು.
‘ಯುಗಾದಿ’ ಸಂದರ್ಭದಲ್ಲಿ ಜೋರಾಯ್ತು ಹೊಸ ವಾಹನ ಖರೀದಿ ಭರಾಟೆ
ಇದೀಗ ಸಿಂಗಲ್ ವಿಂಡೋ ಪದ್ಧತಿ ಜಾರಿಯಾದರೆ ಹೂಡಿಕೆದಾರರು ಪ್ರವಾಸೋದ್ಯಮ ಸ್ಥಳಗಳಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಾರೆ. ಇದರಿಂದ ರಾಜ್ಯ ಸರ್ಕಾರಕ್ಕೂ ಆದಾಯ ಬರುತ್ತದೆ ಜೊತೆಗೆ ಸ್ಥಳೀಯರಿಗೂ ಅನುಕೂಲವಾಗುತ್ತದೆ ಎಂಬ ಚಿಂತನೆಯನ್ನು ಸರ್ಕಾರ ಹೊಂದಿದೆ ಎನ್ನಲಾಗಿದೆ.