alex Certify ಪೊಲೀಸ್ ಪೇದೆಗೆ ಕರೋನಾ ಸೋಂಕು ತಗುಲಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ಪೇದೆಗೆ ಕರೋನಾ ಸೋಂಕು ತಗುಲಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯ ಪೇದೆಗೆ ಕರೋನಾ ಸೋಂಕು ತಗುಲಿದೆ ಎಂಬ ಪ್ರಕರಣಕ್ಕೆ ಈಗ ಹೊಸ ತಿರುವು ದೊರೆತಿದೆ. ಪರೀಕ್ಷೆಗೆಂದು ಪೇದೆಯ ಸ್ವಾಬ್ ಸಂಗ್ರಹಿಸಿದ್ದ ದಿನವೇ ಅದೇ ಹೆಸರಿನ ಮತ್ತೊಬ್ಬರ ಸ್ವಾಬ್ ಸಂಗ್ರಹಿಸಿದ್ದು, ವರದಿ ಅದಲು ಬದಲಾಗಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಈಗ ಇಬ್ಬರನ್ನೂ ಐಸೋಲೇಶನ್ ನಲ್ಲಿ ಇಟ್ಟು ಮತ್ತೊಮ್ಮೆ ಪರೀಕ್ಷೆ ನಡೆಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಅಲ್ಲದೆ ಗೊಂದಲ ಆಗಿರುವ ಕುರಿತು ತನಿಖೆ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಇದರ ಮಧ್ಯೆ ಬಿಟಿಎಂ ಲೇಔಟ್ ನ ಗರ್ಭಿಣಿಗೆ ನಡೆಸಿದ ಮೊದಲ ಪರೀಕ್ಷೆಯಲ್ಲಿ ಕರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಮತ್ತೊಂದು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಗರ್ಭಿಣಿ ಮಹಿಳೆಗೆ ಯಾವುದೇ ಪ್ರಯಾಣದ ಹಿನ್ನೆಲೆ ಹಾಗೂ ಸೋಂಕಿತರ ಸಂಪರ್ಕವಿಲ್ಲದ ಕಾರಣ ಎರಡನೇ ಬಾರಿಗೆ ಪರೀಕ್ಷೆ ನಡೆಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...