ಪೊಲೀಸ್ ಪಡೆ ಸೇರ್ಪಡೆಗೊಳ್ಳಲು ಬಯಸುವವರಿಗೆ ಭರ್ಜರಿ ಬಂಪರ್ ಸುದ್ದಿಯೊಂದು ಇಲ್ಲಿದೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 2672 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ (ಕೆ.ಎಸ್.ಆರ್.ಪಿ) ನ 2420 ಹುದ್ದೆಗಳು ಹಾಗೂ ಬ್ಯಾಂಡ್ಸ್ ಮನ್ (ಕೆ.ಎಸ್.ಆರ್.ಪಿ.) ನ 252 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ಈ ಹುದ್ದೆಗಳಿಗೆ ಸೇರ್ಪಡೆಗೊಳ್ಳಲು ಬಯಸುವ ಆಸಕ್ತರು www.ksp.gov.in ವೆಬ್ ಸೈಟ್ ಗೆ ಲಾಗಿನ್ ಆಗಿ ಆನ್ ಲೈನ್ ಮೂಲಕ 2020 ರ ಮೇ 18 ರಿಂದ 2020 ರ ಜೂನ್ 15ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.