alex Certify ಪೊಲೀಸ್ ಇಲಾಖೆ ವಾಹನಗಳ ಬಳಕೆಗಾಗಿ ಹೊಸ ನಿಯಮ ಜಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ಇಲಾಖೆ ವಾಹನಗಳ ಬಳಕೆಗಾಗಿ ಹೊಸ ನಿಯಮ ಜಾರಿ…!

ರಾಜ್ಯದಲ್ಲಿ ಅನೇಕ ಸರ್ಕಾರಿ ವಾಹನಗಳು ತುಕ್ಕು ಹಿಡಿದು ನಿಂತಿವೆ. ಸಣ್ಣ ಪುಟ್ಟ ರಿಪೇರಿ ಬಂದರೂ ಆ ವಾಹನಗಳನ್ನು ಬಿಟ್ಟು ಹೊಸ ವಾಹನಗಳನ್ನು ಸರ್ಕಾರಿ ಅಧಿಕಾರಿಗಳು ಖರೀದಿಸಿದ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ. ಇದೀಗ ಇಂತಹ ವಾಹನಗಳು ತುಕ್ಕು ಹಿಡಿಯುವುದನ್ನು ತಪ್ಪಿಸೋದಕ್ಕೆ ಹೊಸ ನಿಯಮವೊಂದು ಜಾರಿಗೆ ಬರುತ್ತಿದೆ.

ಹೌದು, ಸಾರ್ವಜನಿಕರ ತೆರಿಗೆ ಹಣ ಅನಾವಶ್ಯಕವಾಗಿ ಖರ್ಚಾಗದಿರಲಿ ಅನ್ನೋ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯಿಂದ ಈ ನಿಯಮ ಜಾರಿಗೆ ತರಲಾಗುತ್ತಿದೆ. ಇನ್ಮುಂದೆ ಸೂಕ್ತ ಕಾರಣವಿಲ್ಲದೆ ವಾಹನವನ್ನು 30 ದಿನಗಳವರೆಗೆ ಓಡಿಸದೆ ನಿಲ್ಲಿಸುವಂತಿಲ್ಲ ಎಂದು ಡಿಜಿಪಿ ಆದೇಶ ಹೊರಡಿಸಿದ್ದಾರೆ. ಭಾರೀ ಮೊತ್ತದ ವಾಹನಗಳು ಕೂಡ ಸಣ್ಣ ಪುಟ್ಟ ರಿಪೇರಿಯಿಂದ ನಿಂತಲ್ಲೇ ನಿಂತಿವೆ. ಹೀಗಾಗಿ ಈ ರೀತಿಯ ರಿಪೇರಿ ಇದ್ದರೆ ಸರಿ ಮಾಡಿಸಿಕೊಂಡು ಓಡಿಸುವಂತೆಯೂ ಆದೇಶದಲ್ಲಿದೆ.

ಡಿಜಿಪಿ ಆದೇಶ ಪ್ರತಿಯಲ್ಲಿ ಒಂದಿಷ್ಟು ರೂಲ್ಸ್‌ಗಳನ್ನು ಹಾಕಿದ್ದಾರೆ. ಕೆಟ್ಟಿರುವ ವಾಹನ 2 ತಿಂಗಳು ರಿಪೇರಿಗೆ ಕಳುಹಿಸದಿದ್ದರೆ ಅದು ಗಂಭೀರ ಅಪರಾಧವಾಗುತ್ತದೆ. ವಾಹನ ತಯಾರಿಕಾ ವರ್ಷ, ಇಂಜಿನ್ ಪರಿಸ್ಥಿತಿ ಆಧರಿಸಿ ಗುಜರಿಗೆ ಹಾಕಲು ಅನುಮತಿ ನೀಡಲಾಗುತ್ತದೆ. ವಾಹನ ವಿಲೇವಾರಿಗೆ ಅನುಮತಿ ಸಿಕ್ಕ 2 ತಿಂಗಳಲ್ಲಿ ಹರಾಜು ಪ್ರಕ್ರಿಯೆ ಮುಗಿಸಬೇಕು. ಆರ್‌ಟಿಒ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಬಿಡ್ ಮಾಡಿದವರಿಗೆ ವಾಹನ ಕೊಡಬೇಕು. ನಿಗದಿತ ಅವಧಿಯಲ್ಲಿ ಬಿಡ್‌ದಾರ ವಾಹನ ಪಡೆಯದಿದ್ದರೆ ಆತನ ಠೇವಣಿ ಹಣ ವಶಕ್ಕೆ ಪಡೆಯಬೇಕು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...