ಮಹಾಮಾರಿ ಕೊರೊನಾದಿಂದ ಬಹುತೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ ಲಾಕ್ಡೌನ್ ಸಡಿಲಿಕೆ ಆಗಿದ್ದರೂ ಸಹ ಈ ಮೊದಲಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಸಾಲ ವಸೂಲಾತಿಗೆ ಸರ್ಕಾರ ಕಡಿವಾಣ ಹಾಕಿತ್ತಾದರೂ ಸಹ ಇದೀಗ ಈ ಪ್ರಕ್ರಿಯೆ ಮತ್ತೆ ಚುರುಕು ಪಡೆದುಕೊಂಡಿದೆ.
ಈ ರೀತಿ ಸಾಲ ಬಾಕಿ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಮನೆ ಜಪ್ತಿಗೆ ಬಂದ ವೇಳೆ ಮನೆಯೊಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಪುತ್ತೂರಿನ ಹಾರಾಡಿಯಲ್ಲಿ ನಡೆದಿದೆ. ಇಂತಹ ಘಟನೆ ಮಧ್ಯೆಯೂ ಬ್ಯಾಂಕ್ ಅಧಿಕಾರಿಗಳು ಜಪ್ತಿ ಕಾರ್ಯ ಮುಂದುವರೆಸಿದ್ದು ಅವರುಗಳ ಅಮಾನವೀಯತೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಥೇಟ್ ಮನುಷ್ಯರಂತೆ ಹಲ್ಲನ್ನ ಹೊಂದಿದೆ ಈ ವಿಚಿತ್ರ ಮೀನು
ಹಾಲಾಡಿಯ ರೈಲ್ವೆ ನಿಲ್ದಾಣ ರಸ್ತೆಯ ನಿವಾಸಿ ಉದ್ಯಮಿ ರಘುವೀರ್ ಪ್ರಭು ಎಂಬವರು ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಪಡೆದಿದ್ದು, ಮರುಪಾವತಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಮನೆ ಜಪ್ತಿಗೆ ಬಂದ ವೇಳೆ ಇಂತಹುದೊಂದು ಮನ ಕಲಕುವ ಘಟನೆ ನಡೆದಿದೆ.