alex Certify ಪುಟ್ಟ ಮಕ್ಕಳಿಗೆ ಊಟ ಮಾಡಿಸುವುದು ಅಷ್ಟು ಸುಲಭವಲ್ಲ ನೋಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮಕ್ಕಳಿಗೆ ಊಟ ಮಾಡಿಸುವುದು ಅಷ್ಟು ಸುಲಭವಲ್ಲ ನೋಡಿ….!

ಮಕ್ಕಳಿಗೆ ಊಟ ಮಾಡಿಸಬೇಕು ಎಂದರೆ ತಂದೆ-ತಾಯಿ ಏನೆಲ್ಲ ಸರ್ಕಸ್ ಮಾಡಬೇಕಾಗುತ್ತದೆ. ಚಂದಮಾಮನನ್ನು ತೋರಿಸುವುದು, ಮೊಬೈಲ್ ನ್ನು ಕೈಗಿತ್ತು, ಊಟ ಮಾಡಿಸುವುದು ಇದೆಲ್ಲ ಮಕ್ಕಳಿಗೂ ಸಾಮಾನ್ಯವಾಗಿದ್ದು, ಇಂದಿನ ಮಕ್ಕಳು ಕೂಡ ಇದಕ್ಕೆಲ್ಲ ಬಗ್ಗುತ್ತಿಲ್ಲ. ಇಲ್ಲೊಂದು ತಂದೆ-ತಾಯಿ ತಮ್ಮ ಮಗುವಿಗೆ ಊಟ ಮಾಡಿಸಲು ಹರಸಾಹಸವನ್ನೇ ಮಾಡಿದ್ದಾರೆ ನೋಡಿ.

ಮಗುವಿಗೆ ಊಟಮಾಡಿಸಲೆಂದು ತಂದೆ ಹಾಡೊಂದಕ್ಕೆ ಸಖತ್ ಆಗಿ ಸ್ಟೆಪ್ ಹಾಕಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮಗುವಿನ ಮುಂದೆ ಅಪ್ಪ ಎಷ್ಟೇ ಡ್ಯಾನ್ಸ್ ಮಾಡಿದರೂ ಕೂಡ ಮಗು ಮಾತ್ರ ಒಂದು ತುತ್ತು ಊಟ ಮಾಡಲು ಒಲ್ಲೆ ಎಂದಿದೆ. ಒಂದೇ ಒಂದು ತುತ್ತು ತಿನ್ನಿಸಲು ತಂದೆ-ತಾಯಿ ಇಬ್ಬರೂ ತಮ್ಮ ಪ್ರತಿಭೆಯನ್ನೆಲ್ಲ ಪಣಕ್ಕಿಟ್ಟು ಕಸರತ್ತು ನಡೆಸಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಭೂಮಿಯಲ್ಲೇ ತುಂಬಾ ಕಷ್ಟ ದ ಕೆಲ್ಸ ಅಂದ್ರೆ ಮಕ್ಕಳಿಗೆ ಊಟಾ ತಿನ್ನಿಸುವುದು.. ಯುವಕರೇ ನೀವು ಬೇರೆ ಎಷ್ಟೇ ಓದಿದ್ದರೂ ಮುಂದೆ ಮನೆಯಲ್ಲಿ ನಿಮಗೆಲ್ಲರಿಗೂ ಇದೇ ಭವಿಷ್ಯ..ಮದುವೆ ಮೊದಲೇ ನೃತ್ಯ ಕ್ಲಾಸ್ ಸೇರಿ ಕೊಳ್ಳಿ ???

Posted by Yuvanand Poojary on Tuesday, January 12, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...