ಮಕ್ಕಳಿಗೆ ಊಟ ಮಾಡಿಸಬೇಕು ಎಂದರೆ ತಂದೆ-ತಾಯಿ ಏನೆಲ್ಲ ಸರ್ಕಸ್ ಮಾಡಬೇಕಾಗುತ್ತದೆ. ಚಂದಮಾಮನನ್ನು ತೋರಿಸುವುದು, ಮೊಬೈಲ್ ನ್ನು ಕೈಗಿತ್ತು, ಊಟ ಮಾಡಿಸುವುದು ಇದೆಲ್ಲ ಮಕ್ಕಳಿಗೂ ಸಾಮಾನ್ಯವಾಗಿದ್ದು, ಇಂದಿನ ಮಕ್ಕಳು ಕೂಡ ಇದಕ್ಕೆಲ್ಲ ಬಗ್ಗುತ್ತಿಲ್ಲ. ಇಲ್ಲೊಂದು ತಂದೆ-ತಾಯಿ ತಮ್ಮ ಮಗುವಿಗೆ ಊಟ ಮಾಡಿಸಲು ಹರಸಾಹಸವನ್ನೇ ಮಾಡಿದ್ದಾರೆ ನೋಡಿ.
ಮಗುವಿಗೆ ಊಟಮಾಡಿಸಲೆಂದು ತಂದೆ ಹಾಡೊಂದಕ್ಕೆ ಸಖತ್ ಆಗಿ ಸ್ಟೆಪ್ ಹಾಕಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮಗುವಿನ ಮುಂದೆ ಅಪ್ಪ ಎಷ್ಟೇ ಡ್ಯಾನ್ಸ್ ಮಾಡಿದರೂ ಕೂಡ ಮಗು ಮಾತ್ರ ಒಂದು ತುತ್ತು ಊಟ ಮಾಡಲು ಒಲ್ಲೆ ಎಂದಿದೆ. ಒಂದೇ ಒಂದು ತುತ್ತು ತಿನ್ನಿಸಲು ತಂದೆ-ತಾಯಿ ಇಬ್ಬರೂ ತಮ್ಮ ಪ್ರತಿಭೆಯನ್ನೆಲ್ಲ ಪಣಕ್ಕಿಟ್ಟು ಕಸರತ್ತು ನಡೆಸಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
https://www.facebook.com/yuvanand.poojary.1/videos/237620987876572