alex Certify ಪತಿ ಹೆಸರನ್ನು ಎಲ್ಲಿಯೂ ಬಳಕೆ ಮಾಡಿಲ್ಲ ಡಿ.ಕೆ. ರವಿ ಪತ್ನಿ ಕುಸುಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಹೆಸರನ್ನು ಎಲ್ಲಿಯೂ ಬಳಕೆ ಮಾಡಿಲ್ಲ ಡಿ.ಕೆ. ರವಿ ಪತ್ನಿ ಕುಸುಮಾ

ಆರ್.ಆರ್. ನಗರದ ಉಪ ಚುನಾವಣೆ ಕಣ ರಂಗೇರಿದೆ. ಇಂದು ಮೂರು ಪಕ್ಷದ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ದಿವಂಗತ ಡಿ.ಕೆ. ರವಿ ಪತ್ನಿ ಕುಸುಮಾ ಕೂಡ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದು, ಡಿ.ಕೆ. ಶಿವಕುಮಾರ್ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.

ಮೊದಲಿನಿಂದಲೂ ಕುಸುಮಾಗೆ ತನ್ನ ಪತಿ ಹೆಸರು ಬಳಸಬಾರದೆಂಬ ಆಕ್ಷೇಪಗಳು ಬರುತ್ತಿದ್ದವು. ಈ ಬೆನ್ನಲ್ಲೇ ಪತಿ ಹೆಸರಿನ ಕಾಲಂನಲ್ಲಿ ಹೆಸರು ಭರ್ತಿ ಮಾಡಿದ್ದಾರಾ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಇದಕ್ಕೀಗ ಸ್ಪಷ್ಟ ಉತ್ತರ ದೊರಕಿದೆ.

ಪತಿ ಹೆಸರು ಇರುವ ಕಾಲಂನಲ್ಲಿ ಕುಸುಮಾ ಪತಿಯ ಹೆಸರು ಅನ್ವಯಿಸುವುದಿಲ್ಲ ಎಂದು ನಮೂದಿಸಿದ್ದಾರೆ. ಹಾಗೆಯೇ ತಮ್ಮ ತಂದೆಯ ಹೆಸರನ್ನು ಬಳಸಿದ್ದಾರೆ. ಅಷ್ಟೇ ಅಲ್ಲ ಪ್ರಮಾಣ ಪತ್ರದಲ್ಲಿ ಎಲ್ಲಿಯೂ ಕೂಡ ತಮ್ಮ ಪತಿ ಹೆಸರು ಬಳಸಿಲ್ಲ ಎಂದು ತಿಳಿದುಬಂದಿದೆ. ಇನ್ನು ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಪ್ರಮಾಣ ಪತ್ರದಲ್ಲಿ 2.47 ಕೋಟಿ ಆಸ್ತಿ ಇರೋದಾಗಿ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...