alex Certify ನಾಳೆ ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಭದ್ರಾವತಿಗೆ ಭೇಟಿ ನೀಡುತ್ತಿದ್ದು, ಆರ್.ಎ.ಎಫ್. ಘಟಕದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಬೆಳಗ್ಗೆ ದೆಹಲಿಯಿಂದ ಹೊರಡುವ ಅಮಿತ್ ಶಾ 11-30 ಕ್ಕೆ ಬೆಂಗಳೂರಿನ ಹೆಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ 12-30 ಕ್ಕೆ ಭದ್ರಾವತಿಗೆ ಬಂದಿಳಿಯಲಿದ್ದಾರೆ.

ಬಳಿಕ ಅಲ್ಲಿಂದ ತೆರಳಿ ಮಿಲಿಟರಿ ಕ್ಯಾಂಪ್ ಡಿಎಆರ್ ಮೈದಾನದಲ್ಲಿ ನಡೆಯುವ ಆರ್.ಎ.ಎಫ್. ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಮಿತ್ ಶಾ 2-15ರ ತನಕ ಕಾರ್ಯಕ್ರಮದಲ್ಲಿ ಇರಲಿದ್ದಾರೆ.

ಕಾರ್ಯಕ್ರಮದ ನಂತರ ವಿಐಎಸ್ಎಲ್ ಅತಿಥಿ ಗೃಹಕ್ಕೆ ತೆರಳುವ ಅಮಿತ್ ಶಾ ಅವರು 3.15 ರವರೆಗೆ ಅಲ್ಲಿರಲಿದ್ದು, ಬಳಿಕ ಭದ್ರಾವತಿ ಹೆಲಿಪ್ಯಾಡ್ ಗೆ ತೆರಳಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...