alex Certify ನಶೆ ಪಾರ್ಟಿಗೆ ಯಾರೆಲ್ಲ ಬರ್ತಿದ್ರು ಗೊತ್ತಾ…? ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಆರೋಪಿ ಖನ್ನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಶೆ ಪಾರ್ಟಿಗೆ ಯಾರೆಲ್ಲ ಬರ್ತಿದ್ರು ಗೊತ್ತಾ…? ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಆರೋಪಿ ಖನ್ನಾ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ಆರೋಪಿ ವಿರೇನ್ ಖನ್ನಾ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ನನ್ನ ಪಾರ್ಟಿಗೆ ನಟ-ನಟಿಯರು ಮಾತ್ರವಲ್ಲ ಕ್ರಿಕೆಟ್ ತಾರೆಯರು ಕೂಡ ಬರುತ್ತಿದ್ದರು ಎಂದು ಹೇಳಿದ್ದಾನೆ.

ಡ್ರಗ್ಸ್ ಪ್ರಕರಣ ಆರೋಪಿ ವಿರೇನ್ ಖನ್ನಾನನ್ನು ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ವಿರೇನ್ ಖನ್ನಾ ತಾನು ಆಯೋಜಿಸುತ್ತಿದ್ದ ಪಾರ್ಟಿಗೆ ನಟ-ನಟಿಯರು, ರಾಜಕಾರಣಿಗಳು, ಅವರ ಪುತ್ರರು, ಉದ್ಯಮಿಗಳ ಮಕ್ಕಳು ಬರುತ್ತಿದ್ದರು ಎಂದು ಹೇಳಿದ್ದಾನೆ. ಅಲ್ಲದೇ ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರಿಕೆಟ್ ತಾರೆಯರು ಕೂಡ ಪಾರ್ಟಿಗೆ ಆಗಮಿಸುತ್ತಿದ್ದರು ಎಂದು ಬಾಯ್ಬಿಟ್ಟಿದ್ದಾನೆ.

ಇನ್ನು ನಟಿ ರಾಗಿಣಿ ದ್ವಿವೇದಿ ನನ್ನ ಪಾರ್ಟಿಗೆ 2 ಬಾರಿ ಮಾತ್ರ ಆಗಿಮಿಸಿದ್ದರು. ಆದರೆ ನಟಿ ಸಂಜನಾ ಗಲ್ರಾಣಿ ಹಲವು ಸಲ ಪಾರ್ಟಿಗೆ ಬಂದಿದ್ದಾರೆ ಎಂದು ಹೇಳಿದ್ದಾನೆ. ಆದರೆ ಯಾವೆಲ್ಲ ರಾಜಕಾರಣಿಗಳ ಹೆಸರನ್ನು ಮಾತ್ರ ವಿರೇನ್ ಬಾಯ್ಬಿಡುತ್ತಿಲ್ಲ ಎಂದು ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...