ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ಆರೋಪಿ ವಿರೇನ್ ಖನ್ನಾ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ನನ್ನ ಪಾರ್ಟಿಗೆ ನಟ-ನಟಿಯರು ಮಾತ್ರವಲ್ಲ ಕ್ರಿಕೆಟ್ ತಾರೆಯರು ಕೂಡ ಬರುತ್ತಿದ್ದರು ಎಂದು ಹೇಳಿದ್ದಾನೆ.
ಡ್ರಗ್ಸ್ ಪ್ರಕರಣ ಆರೋಪಿ ವಿರೇನ್ ಖನ್ನಾನನ್ನು ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ವಿರೇನ್ ಖನ್ನಾ ತಾನು ಆಯೋಜಿಸುತ್ತಿದ್ದ ಪಾರ್ಟಿಗೆ ನಟ-ನಟಿಯರು, ರಾಜಕಾರಣಿಗಳು, ಅವರ ಪುತ್ರರು, ಉದ್ಯಮಿಗಳ ಮಕ್ಕಳು ಬರುತ್ತಿದ್ದರು ಎಂದು ಹೇಳಿದ್ದಾನೆ. ಅಲ್ಲದೇ ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರಿಕೆಟ್ ತಾರೆಯರು ಕೂಡ ಪಾರ್ಟಿಗೆ ಆಗಮಿಸುತ್ತಿದ್ದರು ಎಂದು ಬಾಯ್ಬಿಟ್ಟಿದ್ದಾನೆ.
ಇನ್ನು ನಟಿ ರಾಗಿಣಿ ದ್ವಿವೇದಿ ನನ್ನ ಪಾರ್ಟಿಗೆ 2 ಬಾರಿ ಮಾತ್ರ ಆಗಿಮಿಸಿದ್ದರು. ಆದರೆ ನಟಿ ಸಂಜನಾ ಗಲ್ರಾಣಿ ಹಲವು ಸಲ ಪಾರ್ಟಿಗೆ ಬಂದಿದ್ದಾರೆ ಎಂದು ಹೇಳಿದ್ದಾನೆ. ಆದರೆ ಯಾವೆಲ್ಲ ರಾಜಕಾರಣಿಗಳ ಹೆಸರನ್ನು ಮಾತ್ರ ವಿರೇನ್ ಬಾಯ್ಬಿಡುತ್ತಿಲ್ಲ ಎಂದು ತಿಳಿದು ಬಂದಿದೆ.