ಇತ್ತೀಚಿನ ದಿನಗಳಲ್ಲಿ ಹ್ಯಾಕರ್ಸ್ ಕಾಟ ಹೆಚ್ಚುತ್ತಿದ್ದು, ಇದೀಗ ಮಾಜಿ ಸಂಸದೆ, ನಟಿ ರಮ್ಯಾ ಅವರಿಗೂ ಹ್ಯಾಕರ್ಸ್ ಸಂಕಷ್ಟ ಎದುರಾಗಿದೆ. ನಟಿ ರಮ್ಯಾ ಅವರ ಇನ್ ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯಂತೆ.
ಈ ಬಗ್ಗೆ ಸ್ವತ: ರಮ್ಯಾ ಮಾಹಿತಿ ನೀಡಿದ್ದು, ನನ್ನ ಇನ್ ಸ್ಟಾ ಅಕೌಂಟ್ ಹ್ಯಾಕ್ ಆಗಿದ್ದು, ನಾನು ಯಾವುದೇ ವಿಡಿಯೋ ಹಾಕಿದರೂ ಆ ಪೋಸ್ಟ್ ಶೋ ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಬಳಿಕ ರಾಜಕಾರಣದಿಂದ ಮಾತ್ರವಲ್ಲ ಸಾಮಾಜಿಕ ಜಾಲತಾಣಗಳಿಂದಲೇ ದೂರವಿದ್ದ ರಮ್ಯಾ ಇತ್ತೀಚೆಗೆ ಮತ್ತೆ ಸೋಶಿಯಲ್ ಮೀಡಿಯಾಗೆ ಮರಳಿದ್ದಾರೆ.