alex Certify ನಟಿಯರಾದ ಸಂಜನಾ, ರಾಗಿಣಿ ಬಗ್ಗೆ ಪ್ರಶಾಂತ್ ಸಂಬರಗಿ ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿಯರಾದ ಸಂಜನಾ, ರಾಗಿಣಿ ಬಗ್ಗೆ ಪ್ರಶಾಂತ್ ಸಂಬರಗಿ ಹೇಳಿದ್ದೇನು…?

ಬೆಂಗಳೂರು: ಫಿಲ್ಮ್ ಚೇಂಬರ್ ಏನು ನಿರಾಶ್ರಿತ ಕೇಂದ್ರನಾ? ಇಲ್ಲ ಯೋಗಾ ಸೆಂಟರಾ? ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಫಿಲ್ಮ್ ಚೇಂಬರ್ ವಿರುದ್ಧ ಕಿಡಿಕಾರಿದ್ದಾರೆ.

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ವಿಚಾರವಾಗಿ ಫಿಲ್ಮ್ ಚೇಂಬರ್ ಬಳಿ ಮೊದಲು ಹೋಗಬೇಕಿತ್ತು ಅನ್ನುತ್ತಾರೆ. ನಾನು, ಇಂದ್ರಜಿತ್ ಫಿಲ್ಮ್ ಚೇಂಬರ್ ಬಳಿ ಹೋಗಬೇಕಿತ್ತಾ? ಎಂದು ಪ್ರಶ್ನಿಸಿದರು.

ಚಿತ್ರರಂಗಕ್ಕೆ ನಿಮ್ಮ ಕೊಡುಗೆಯೇನು ಎಂದು ಪ್ರಶ್ನಿಸುತ್ತಾರೆ. ನಾನು ಕನ್ನಡ, ತಮಿಳು, ತೆಲುಗು ಚಿತ್ರಗಳನ್ನು ಡಿಸ್ಟ್ರಿಬ್ಯೂಟ್ ಮಾಡಿದ್ದೇನೆ. ಚಿತ್ರರಂಗದಲ್ಲಿ ಹಲವು ವಿಭಾಗಗಳಿವೆ. ಕೇವಲ ನಟನೆ, ನಿರ್ದೇಶನ ಮಾತ್ರವಲ್ಲ, ನಾನು ಇಂಡಸ್ಟ್ರಿಗೆ ಸಣ್ಣ ಪುಟ್ಟ ಕೆಲಸ ಮಾಡಿದ್ದೇನೆ. ದೊಡ್ಡ ದೊಡ್ಡ ಕೆಲಸ ಮಾಡಿ ಹಣ ಮಾಡಲು ನನ್ನಿಂದ ಆಗಿಲ್ಲ ಎಂದರು.

ಇದೇ ವೇಳೆ ನಟಿ ಸಂಜನಾ ಬಗ್ಗೆ ಮಾತನಾಡಿ ಬಾಯಿ ಹೊಲಸು ಮಾಡಿಕೊಳ್ಳಲ್ಲ. ಅವರು ಯಾವ ಮಟ್ಟದಲ್ಲಿದ್ದಾರೆ ಎಂಬುದು ಇಂಡಸ್ಟ್ರಿಗೆ ಗೊತ್ತು. ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ? ಇನ್ನು ನಟಿ ರಾಗಿಣಿ ಘಮ್ ಘಮ್ ಎಂದು ನಾರುತ್ತಿದ್ದಾರಾ? ರಾಗಿಣಿ ಹಾಗೂ ಆರ್.ಟಿ.ಒ. ಆಫೀಸರ್ ಹಲವು ಬಾರಿ ಯುಬಿ‌ ಸಿಟಿಯಲ್ಲಿ ಒಟ್ಟಿಗೆ ಇರುವುದನ್ನು ನೋಡಿದ್ದೇನೆ. ಅಲ್ಲದೇ ರಾಗಿಣಿಯೇ ಅವರನ್ನು ಮದುವೆಯಾಗುವುದಾಗಿಯೂ ಹೇಳಿದ್ದರು. ಹೌದಾ..? ಒಳ್ಳೆಯದಾಗಲಿ ಎಂದು ನಾನು ಹಾರೈಸಿದ್ದೆ ಅಷ್ಟೇ. ಆದರೆ ಡ್ರಗ್ಸ್ ಜಾಲದಲ್ಲಿ ಅವರಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...