alex Certify ‘ನಕಲು’ ಮಾಡಲು ಅವಕಾಶ ಸಿಗದ್ದಕ್ಕೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಪ್ರತಿಭಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಕಲು’ ಮಾಡಲು ಅವಕಾಶ ಸಿಗದ್ದಕ್ಕೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಪ್ರತಿಭಟನೆ

ಕೋಲ್ಕತಾ ಮೂಲದ ಈ ವಿದ್ಯಾರ್ಥಿಗಳು ಮಧ್ಯವರ್ತಿಯೊಬ್ಬರ ಮೂಲಕ ನರ್ಸಿಂಗ್ ಪರೀಕ್ಷೆ ಬರೆಯಲು ಶಿವಮೊಗ್ಗಕ್ಕೆ ಆಗಮಿಸಿದ್ದು, ಅವರುಗಳಿಗೆ ಪರೀಕ್ಷೆಯಲ್ಲಿ ನಕಲು ಮಾಡುವ ಅವಕಾಶ ಕಲ್ಪಿಸುವ ಭರವಸೆ ನೀಡಲಾಗಿತ್ತೆನ್ನಲಾಗಿದೆ.

ಸೋಮವಾರದಂದು ಹಾಲ್ ಟಿಕೆಟ್ ಸಿಗುವುದು ವಿಳಂಬವಾದ ಕಾರಣ ತಡವಾಗಿ ಪರೀಕ್ಷೆಗೆ ಹಾಜರಾಗಿದ್ದ ಈ ವಿದ್ಯಾರ್ಥಿಗಳು ಮರುದಿನದ ಪರೀಕ್ಷೆಗೆ ಹಾಜರಾಗದೆ ಪರೀಕ್ಷಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಒಂದೇ ಒಂದು ಫೋಟೋದಿಂದ ಭಾರೀ ಮುಖಭಂಗ ಅನಭವಿಸಿದ ಡೊನಾಲ್ಡ್ ಟ್ರಂಪ್.​..!

ಮಧ್ಯವರ್ತಿ ತಮ್ಮಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದು, ಆದರೆ ಪರೀಕ್ಷೆಯಲ್ಲಿ ಪುಸ್ತಕ ನೋಡಲು ಅವಕಾಶ ಸಿಗುತ್ತಿಲ್ಲ ಎಂದು ಆರೋಪಿಸಿದ ವಿದ್ಯಾರ್ಥಿಗಳು ಬಳಿಕ ತಮಗೆ ಹಣ ವಾಪಸ್ ಕೊಡಿಸುವಂತೆ ಆಗ್ರಹಿಸಿ ಪೊಲೀಸ್ ಠಾಣೆ ಮುಂದೆಯೂ ಪ್ರತಿಭಟನೆ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...