alex Certify ದೇವೇಗೌಡರ ಓಡಾಟಕ್ಕೆ 60 ಲಕ್ಷ ಮೌಲ್ಯದ ಹೊಸ ಕಾರು ಒದಗಿಸಿದ ರಾಜ್ಯ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವೇಗೌಡರ ಓಡಾಟಕ್ಕೆ 60 ಲಕ್ಷ ಮೌಲ್ಯದ ಹೊಸ ಕಾರು ಒದಗಿಸಿದ ರಾಜ್ಯ ಸರ್ಕಾರ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭಾನುವಾರದಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅವರು ಈಗ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ದೇವೇಗೌಡರ ಓಡಾಟಕ್ಕೆ ರಾಜ್ಯ ಸರ್ಕಾರ ಹೊಸ ಕಾರು ಒದಗಿಸಿದ್ದು, ಇದರ ಮೌಲ್ಯ ಬರೋಬ್ಬರಿ 60 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.

ವೋಲ್ವೋ ಎಕ್ಸ್ ಸಿ 60ಡಿ5 ಮಾಡೆಲ್ ನ ಕಾರಿನ ಬೆಲೆ ತೆರಿಗೆ ಹಾಗೂ ವಿಮಾ ಮೊತ್ತ ಸೇರಿ 74.90 ಲಕ್ಷ ರೂಪಾಯಿಗಳೆಂದು ಹೇಳಲಾಗಿದ್ದು, ಆದರೆ ಸರ್ಕಾರದ ಹೆಸರಿನಲ್ಲಿ ಖರೀದಿಸುವ ಕಾರಣ ತೆರಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಇದರ ಬೆಲೆ 60 ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...