alex Certify ಡ್ರಗ್ಸ್ ಮಾಫಿಯಾ: ಸ್ಯಾಂಡಲ್ ವುಡ್ ನ 20 ತಾರೆಯರ ಲಿಸ್ಟ್ ಸಿದ್ಧ ಪಡಿಸಿದ ಅಧಿಕಾರಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ಮಾಫಿಯಾ: ಸ್ಯಾಂಡಲ್ ವುಡ್ ನ 20 ತಾರೆಯರ ಲಿಸ್ಟ್ ಸಿದ್ಧ ಪಡಿಸಿದ ಅಧಿಕಾರಿಗಳು

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಎನ್ ಸಿಬಿ ಅಧಿಕಾರಿಗಳು ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ಸ್ಯಾಂಡಲ್ ವುಡ್ ನ 20 ಜನರ ಪಟ್ಟಿ ಸಿದ್ಧಪಡಿಸಿದ್ದಾರೆ.

ಡ್ರಗ್ಸ್ ಪೆಡ್ಲರ್ ಅನಿಕಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸ್ಯಾಂಡಲ್ ವುಡ್ ನ ನಟ-ನಟಿ-ನಿರ್ದೇಶಕರು ಸೇರಿ 20 ಜನರಿಗೆ ಡ್ರಗ್ಸ್ ಪೂರೈಕೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾಳೆ.

ಇವರಲ್ಲಿ ಮೂವರು ಖ್ಯಾತ ನಟಿಯರಿದ್ದು, ಇಬ್ಬರು ನಟರು, ಮೂವರು ಧಾರಾವಾಹಿ ಕಲಾವಿದರು, ಓರ್ವ ಸಂಗೀತ ನಿರ್ದೇಶಕ ಹಾಗೂ ನಾಲ್ವರು ಗಣ್ಯ ವ್ಯಕ್ತಿಗಳ ಮಕ್ಕಳಿದ್ದು, ಇವರ ಪಟ್ಟಿಯನ್ನು ಎನ್ ಸಿ ಬಿ ಸಿದ್ಧಪಡಿಸಿದೆ. ಇವರೆಲ್ಲರೂ ಅನಿಕಾಳಿಂದ ಡ್ರಗ್ಸ್ ಖರೀದಿ ಮಾಡುತ್ತಿರುವುದು ತಿಳಿದುಬಂದಿದೆ.

ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಎನ್ ಸಿ ಬಿ ನಡೆಸಿದ್ದ ದಾಳಿಯಲ್ಲಿ ಅನಿಕಾ, ರಾಜೇಶ್ ರವೀಂದ್ರನ್ ಹಾಗೂ ಅನೂಪ್ ಎಂಬುವವರನ್ನು ಬಂಧಿಸಲಾಗಿತ್ತು. ಇನ್ನು ಬಂಧಿತ ಡ್ರಗ್ಸ್ ಪೆಡ್ಲರ್ ಅನಿಕಾ ಪತಿ ರೆಹಮಾನ್ ಮುಂಬೈ ಎನ್ ಸಿ ಬಿ ಅಧಿಕಾರಿಗಳ ವಶದಲ್ಲಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...