alex Certify ಡ್ರಗ್ಸ್ ಮಾಫಿಯಾ ಪ್ರಕರಣ: ಸಿಸಿಬಿಯಿಂದ ಮತ್ತೋರ್ವ ಆರೋಪಿ ಬಂಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ಮಾಫಿಯಾ ಪ್ರಕರಣ: ಸಿಸಿಬಿಯಿಂದ ಮತ್ತೋರ್ವ ಆರೋಪಿ ಬಂಧನ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ವೈಯ್ಯಾಲಿ ಕಾವಲ್ ಮನೆಯಲ್ಲಿ ಆರೋಪಿ ವೈಭವ್ ಜೈನ್ ನನ್ನು ಪೊಲೀಸರು ಬಂಧಿಸಿದ್ದಾರೆ. ವೈಭವ್ ಜೈನ್ ಪ್ರಕರಣದ 5ನೇ ಆರೋಪಿಯಾಗಿದ್ದು, ಚಿನ್ನದ ವ್ಯಾಪಾರಿಯ ಪುತ್ರನಾಗಿದ್ದಾನೆ.

ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ತನ್ನನ್ನು ಸಿಸಿಬಿ ಬಂಧಿಸಲಿದೆ ಎಂಬುದು ತಿಳಿಯುತ್ತಿದ್ದಂತೆಯೇ ವೈಭವ್ ತನಗೆ ಕೊರೊನಾ ಸೋಂಕು ತಗುಲಿದ್ದು, ಹೋಂ ಐಸೋಲೇಷನ್ ನಲ್ಲಿರುವುದಾಗಿ ಹೇಳಿದ್ದ.

ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ರವಿಶಂಕರ್ ಗೆ 2018ರಲ್ಲಿ ಹೋಟೆಲ್ ಪಾರ್ಟಿಯೊಂದರಲ್ಲಿ ವೈಭವ್ ಪರಿಚಯವಾಗಿದ್ದು, ಆತ ಅರುಣ್, ವಿನಯ್, ಪ್ರಶಾಂತ್ ರಂಕಾ ಮೂಲಕವಾಗಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಎಂಬ ಬಗ್ಗೆ ಮಾಹಿತಿ ತಿಳಿದಿದ್ದು. ರವಿಶಂಕರ್ ಮಾಹಿತಿ ಮೇರೆಗೆ ವೈಭವ್ ಜೈನ್ ನನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...