alex Certify ಡ್ರಗ್ಸ್ ನಶೆಯಲ್ಲಿ ರಸ್ತೆ ಮಧ್ಯೆಯೇ ಯುವತಿಯರ ರಂಪಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ನಶೆಯಲ್ಲಿ ರಸ್ತೆ ಮಧ್ಯೆಯೇ ಯುವತಿಯರ ರಂಪಾಟ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಗ್ಯಾಂಗ್ ನ ದಾಂಧಲೇ ಮುಂದುವರೆದಿದೆ. ವಿದೇಶಿ ಪ್ರಜೆಗಳು ತಡರಾತ್ರಿ ನಶೆಯಲ್ಲಿ ರಂಪಾಟ ನಡೆಸಿರುವ ಘಟನೆ ಯಲಹಂಕದಲ್ಲಿ ನಡೆದಿದೆ.

ಯಲಹಂಕದ ಸಂಭ್ರಮ್ ಕಾಲೇಜು ಬಳಿ ಆಫ್ರಿಕನ್ ಯುವಕರು ಹಾಗೂ ಕೆಲ ಅಸ್ಸಾಂ ಮೂಲದ ಯುವತಿಯರು ಡ್ರಗ್ಸ್ ಸೇವಿಸಿ ರಸ್ತೆ ಮಧ್ಯೆಯೇ ಗಲಾಟೆ ಆರಂಭಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರ ಜೊತೆಯೂ ವಾಗ್ವಾದಕ್ಕೆ ಇಳಿದಿದ್ದಾರೆ. ವಿಡಿಯೋ ಚಿತ್ರೀಕರಣ ಮಾಡುತ್ತಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ಯುವತಿಯರು ಪೊಲೀಸರ ಮೇಲೆಯೇ ಮುಗಿಬಿದ್ದು ರಂಪಾಟ ನಡೆಸಿದ್ದಾರೆ.

ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲ ದಿನಗಳಿಂದ ಡ್ರಗ್ಸ್ ಜಾಲದ ವಿರುದ್ಧ ಪೊಲೀಸರು ನಿರಂತರ ಸಮರ ಸಾರಿದ್ದರೂ ಕೂಡ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇನ್ನೂ ನಶೆ ಪಾರ್ಟಿ, ಡ್ರಗ್ಸ್ ದಂಧೆಗಳು ನಿಂತಿಲ್ಲ ಎನ್ನಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...