alex Certify ಗೃಹಬಳಕೆ ವಿದ್ಯುತ್ ಬಿಲ್ ನೋಡಿ ಗ್ರಾಹಕ ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹಬಳಕೆ ವಿದ್ಯುತ್ ಬಿಲ್ ನೋಡಿ ಗ್ರಾಹಕ ಕಂಗಾಲು

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ತಿಂಗಳಿಗೂ ಅಧಿಕ ಕಾಲದಿಂದ ವ್ಯಾಪಾರ-ವಹಿವಾಟು ಇಲ್ಲದೆ ಜನತೆ ಆರ್ಥಿಕವಾಗಿ ಕಂಗೆಟ್ಟಿದ್ದರು.

ಇದರ ಮಧ್ಯೆ ಈಗ ನೀಡಲಾಗುತ್ತಿರುವ ವಿದ್ಯುತ್ ಬಿಲ್ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಳಕೆದಾರರಿಗೆ ದೊಡ್ಡ ಮೊತ್ತದ ಬಿಲ್ ನೀಡಲಾಗುತ್ತಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿದೆ.

ಇದಕ್ಕೆ ಉದಾಹರಣೆ ಎಂಬಂತೆ ಧಾರವಾಡ ನಗರದ ಹೊಸ ಯಲ್ಲಾಪುರದ ಆರೇರ್ ಓಣಿಯ ನಿವಾಸಿ ರಾಜು ಬಿರ್ಜೆಣ್ಣವರ ಅವರ ಗೃಹಬಳಕೆ ವಿದ್ಯುತ್ ಬಿಲ್ ಬರೋಬ್ಬರಿ 7,64,581 ರೂ. ಬಂದಿದೆ.

ಇದನ್ನು ನೋಡಿ ಕಂಗಾಲಾದ ಗ್ರಾಹಕ ಅಧಿಕಾರಿಗಳಿಗೆ ತಿಳಿಸಿದ್ದು, ಇದೀಗ ಈ ಬಿಲ್ಲನ್ನು ಹಿಂಪಡೆದು ಸರಿಪಡಿಸಿದ ಬಳಿಕ ಮತ್ತೊಂದು ಬಿಲ್ ನೀಡುವುದಾಗಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...