ಮೈಸೂರು: ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಸೋಂಕಿಗೆ ಇನ್ನೆರಡು ತಿಂಗಳಲ್ಲಿ ವ್ಯಾಕ್ಸಿನ್ ಬರಲಿದೆ. ಈಗಾಗಲೇ ಹಲವರ ಮೇಲೆ ವ್ಯಾಕ್ಸಿನ್ ಪ್ರಯೋಗ ನಡೆದಿದೆ ಎಂದು ವಿಜ್ಞಾನಿ ಪ್ರೊ.ಕೆ.ಎಸ್. ರಂಗಪ್ಪ ತಿಳಿಸಿದ್ದಾರೆ.
ಹಿಂದೆ ವ್ಯಾಕ್ಸಿನ್ ಸಂಶೋಧನೆಗೆ 2 ವರ್ಷಗಳು ಬೇಕಾಗುತ್ತಿತ್ತು. ಆದರೆ ಈಗ ಕೊರೊನಾ ಸೋಂಕು ಕಂಡುಬಂದ ಮೊದಲ ದಿನದಿಂದಲೇ ಸಂಶೋಧನೆ ಆರಂಭವಾಗಿದೆ. 6 ಸಾವಿರ ಸಂಶೋಧಕರು ವ್ಯಾಕ್ಸಿನ್ ಸಂಶೋಧನೆ ಮಾಡುತ್ತಿದ್ದಾರೆ. ಇನ್ನೆರಡು ತಿಂಗಳಲ್ಲಿ ವ್ಯಾಕ್ಸಿನ್ ಲಭ್ಯವಾಗಲಿದೆ ಎಂದಿದ್ದಾರೆ.
ಎಡ್ವರ್ಡ್ ಜನ್ನರ್ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ನಡೆಯುತ್ತಿದ್ದು, ಹಲವರ ಮೇಲೆ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. 2000 ರೂ. ಗೂ ಕಡಿಮೆ ದರದಲ್ಲಿ ಕೋವಿಡ್ ವ್ಯಾಕ್ಸಿನ್ ಸಿಗಲಿದೆ ಎಂದು ಹೇಳಿದ್ದಾರೆ.