ಬೆಂಗಳೂರಿನ ಕೆಲ ಹೊಟೇಲ್ ಗಳಲ್ಲಿ ಕೊರೊನಾ ಶಂಕಿತ, ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಬಿಬಿಎಂಪಿ ಎಲ್ಲ ಹೊಟೇಲ್ ಗಳಿಗೆ ದರ ನಿಗದಿ ಮಾಡಿದೆ. ಫೈವ್ ಸ್ಟಾರ್ ಹೊಟೇಲ್ ಒಂದು ರೂಮಿನ ಬೆಲೆ ಪ್ರತಿ ದಿನ 3 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ. ಒಂದು ರೂಮಿನಲ್ಲಿ ಇಬ್ಬರಿದ್ದರೆ 3700 ರೂಪಾಯಿ ಪಾವತಿ ಮಾಡಬೇಕು.
ಉಪಹಾರ, ಊಟದ ಬೆಲೆಯನ್ನೂ ನಿಗದಿ ಮಾಡಲಾಗಿದೆ. ಬೆಳಗಿನ ಉಪಹಾರಕ್ಕೆ ಹಾಗೂ ರಾತ್ರಿ ಊಟಕ್ಕೆ 550 ರೂಪಾಯಿ ನಿಗದಿಪಡಿಸಲಾಗಿದೆ. ಥ್ರೀಸ್ಟಾರ್ ಹೊಟೇಲ್ ಉಪಹಾರ ಸೇರಿ 1500 ರೂಪಾಯಿ ನಿಗದಿ ಮಾಡಲಾಗಿದೆ. ಒಂದೇ ಕೊಠಡಿಯಲ್ಲಿ ಇಬ್ಬರಿದ್ದರೆ 1750 ರೂಪಾಯಿ ಪಾವತಿಸಬೇಕು.
ಥ್ರೀಸ್ಟಾರ್ ಹೊಟೇಲ್ ಉಪಹಾರ ಹಾಗೂ ರಾತ್ರಿ ಊಟಕ್ಕೆ 175 ರೂಪಾಯಿ ನಿಗದಿ ಮಾಡಲಾಗಿದೆ. ಬಿಬಿಎಂಪಿ ಸಭೆ ನಂತ್ರ ಈ ನಿರ್ಧಾರಕ್ಕೆ ಬರಲಾಗಿದೆ. ಇಷ್ಟೇ ಅಲ್ಲ ಇನ್ನೂ ಕೆಲ ಹೊಟೇಲ್, ಶಾಲೆ, ಸಭಾಭವನವನ್ನು ವಶಕ್ಕೆ ಪಡೆದು ಕ್ವಾರಂಟೈನ್ ಸ್ಥಳ ಮಾಡಲು ನಿರ್ಧರಿಸಲಾಗಿದೆ.