alex Certify ಕೋವಿಡ್ ರಿಪೋರ್ಟ್ ಇಲ್ಲವೆಂದು ಗರ್ಭಿಣಿಯನ್ನು ಸೇರಿಸಿಕೊಳ್ಳದ ಸಿಬ್ಬಂದಿ; ಆಸ್ಪತ್ರೆ ವಾರ್ಡ್ ಮುಂದೆ ನಿಂತ ಸ್ಥಳದಲ್ಲೇ ಹೆರಿಗೆ; ಮಗು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ರಿಪೋರ್ಟ್ ಇಲ್ಲವೆಂದು ಗರ್ಭಿಣಿಯನ್ನು ಸೇರಿಸಿಕೊಳ್ಳದ ಸಿಬ್ಬಂದಿ; ಆಸ್ಪತ್ರೆ ವಾರ್ಡ್ ಮುಂದೆ ನಿಂತ ಸ್ಥಳದಲ್ಲೇ ಹೆರಿಗೆ; ಮಗು ಸಾವು

ಮಂಡ್ಯ: ಹೆರಿಗೆ ನೋವಿಂದ ಆಸ್ಪತ್ರೆಗೆ ಬಂದ ತುಂಬು ಗರ್ಭಿಣಿಯನ್ನು ಸಿಬ್ಬಂದಿಗಳು ಆಸ್ಪತ್ರೆಗೆ ಸೇರಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ಹುಟ್ಟಿದ ತಕ್ಷಣ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಕೋತಿಗಳಿಗೆ ಚಿಪ್ಸ್​ ನೀಡಲು ಹೋಗಿ ಕೆಲಸ ಕಳೆದುಕೊಂಡ ಮಹಿಳೆ….!

ತುಂಬು ಗರ್ಭಿಣಿ ಸೋನು ಎಂಬ ಮಹಿಳೆ ಹೆರಿಗೆ ನೋವು ಬರುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಆದರೆ ಕೋವಿಡ್ ಟೆಸ್ಟ್ ವರದಿ ಇಲ್ಲ ಎಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿಲ್ಲ. ಎರಡು ಗಂಟೆಗಳ ಕಾಲ ಆಸ್ಪತ್ರೆಯ ಹೆರಿಗೆ ವಾರ್ಡ್ ಮುಂದೆಯೇ ನರಳಾಡಿದ ಮಹಿಳೆ ನಿಂತ ಜಾಗದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಹುಟ್ಟಿದ ಮಗು ಸಾವನ್ನಪ್ಪಿದೆ.

ಸೇನೆಗೆ ಸೇರಲಿದ್ದಾರೆ ಹುತಾತ್ಮ ಯೋಧನ ಪತ್ನಿ

ಜಿಲ್ಲಾಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷಕ್ಕೆ ಪ್ರಪಂಚ ನೋಡುವ ಮುನ್ನವೇ ಶಿಶು ಸಾವನ್ನಪ್ಪಿದ್ದು, ಆಸ್ಪತ್ರೆ ಮುಂದೆ ಹೆತ್ತ ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...