ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿನ ಸಂಖ್ಯೆಯನ್ನ ಗಮನದಲ್ಲಿಟ್ಟುಕೊಂಡು ರಾಜಸ್ಥಾನ ಸರ್ಕಾರ ಮೇ 10ರಿಂದ 24ರವರೆಗೆ 2 ವಾರಗಳ ಕಾಲ ಸಂಪೂರ್ಣ ಲಾಕ್ಡೌನ್ ವಿಧಿಸಿದೆ.
ಮೇ 10ನೇ ತಾರೀಖಿನ ಬೆಳಗ್ಗೆ 5 ಗಂಟೆಯಿಂದಲೇ ಕಠಿಣ ಲಾಕ್ಡೌನ್ ಆದೇಶ ರಾಜಸ್ಥಾನದಲ್ಲಿ ಜಾರಿಗೆ ಬರಲಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ರಾಜಸ್ಥಾನದಲ್ಲಿ ಮದುವೆ ಸಮಾರಂಭಗಳನ್ನ ನಡೆಸಲು ಮೇ 31ರ ವರೆಗೆ ನಿರ್ಬಂಧ ಹೇರಲಾಗಿದೆ. ಈಗಾಗಲೇ ಕಲ್ಯಾಣ ಮಂಟಪಕ್ಕೆ ಮುಂಗಡ ಹಣ ಬುಕ್ ಮಾಡಿಕೊಂಡವರ ಹಣ ಹಿಂದಿರುಗಿಸುವುದು ಇಲ್ಲವೇ ಮುಂದಿನ ದಿನಗಳಲ್ಲಿ ಹಣ ನೀಡುವುದು ಈ ರೀತಿಯ ಪಯಾರ್ಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದೆ.
ಆದರೆ ಕೋರ್ಟ್ ಮದುವೆ ಹಾಗೂ ಮನೆಯಲ್ಲೇ ಮದುವೆಯನ್ನ ಹಮ್ಮಿಕೊಳ್ಳುವವರಿಗೆ ಅವಕಾಶ ನೀಡಲಾಗಿದೆ. ಮದುವೆಯಲ್ಲಿ ಭಾಗವಹಿಸುವವರ ಸಂಖ್ಯೆ 11 ಮಂದಿಗಿಂತ ಹೆಚ್ಚಾಗಬಾರದೂ ಎಂದೂ ನಿಬಂಧನೆ ವಿಧಿಸಲಾಗಿದೆ. ಮದುವೆಯನ್ನ ಆಯೋಜಿಸುತ್ತಿರುವ ಕುಟುಂಬ covidinfo.rajasthan.gov.in.ನಲ್ಲಿ ಸಂಪೂರ್ಣ ಮಾಹಿತಿಯನ್ನ ನೀಡಬೇಕಾಗುತ್ತದೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೆ 8 ರೋಗಿಗಳ ದುರ್ಮರಣ; ಮುಂದುವರಿದ ಸರಣಿ ಸಾವು
ಇನ್ನು ಇದರ ಜೊತೆಯಲ್ಲಿ ಕೋವಿಡ್ 19 ಹಳ್ಳಿ ಹಳ್ಳಿಗಳಲ್ಲೂ ಹಬ್ಬುತ್ತಿರೋದ್ರಿಂದ ನರೇಗಾ ಕಾರ್ಯಗಳೂ ಮುಂದೂಡಲ್ಪಟ್ಟಿವೆ. ಲಾಕ್ಡೌನ್ ಅವಧಿಯಲ್ಲಿ ಧಾರ್ಮಿಕ ಪ್ರದೇಶಗಳು ಬಂದ್ ಆಗತಕ್ಕದ್ದು. ತುರ್ತು ಸೇವಾ ವಾಹನ, ಸರ್ಕಾರಿ ಹಾಗೂ ಖಾಸಗಿ ಸರಕು ಸಾಗಣೆ ವಾಹನ ಹೊರತುಪಡಿಸಿ ಇನ್ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ.
ರಾಜ್ಯ ಹಾಗೂ ಅಂತರಾಜ್ಯ ಸರಕು ಸಾಗಣಿಕೆಗೆ ಮುಕ್ತ ಅವಕಾಶ. ಅಂತಾರಾಜ್ಯ, ಅಂತರ್ಜಿಲ್ಲಾ ಪ್ರಯಾಣಕ್ಕೆ ಅವಕಾಶವಿಲ್ಲ.
ಬೇರೆ ರಾಜ್ಯಗಳಿಂದ ರಾಜಸ್ಥಾನಕ್ಕೆ ಬಂದವರಿಗೆ ಆರ್ ಟಿ ಪಿ ಸಿ ಆರ್ ಟೆಸ್ಟ್ ಕಡ್ಡಾಯ. ಪಾಸಿಟಿವ್ ರಿಪೋರ್ಟ್ ಹೊಂದಿದವರಿಗೆ 15 ದಿನ ಕ್ವಾರಂಟೈನ್ ಕಡ್ಡಾಯ ಎಂದು ಸೂಚನೆ ನೀಡಲಾಗಿದೆ.