ಕೊರೊನಾ 2ನೇ ಅಲೆಯ ಆತಂಕದ ನಡುವೆಯೂ ಯುಗಾದಿಗೆ ಜನತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಿಂದೂ ಪಂಚಾಂಗದ ಪ್ರಕಾರ ವರ್ಷದ ಮೊದಲ ಹಬ್ಬ ಯುಗಾದಿಯನ್ನು ಆಚರಿಸಲು ಜನರು ಮುಂದಾಗಿದ್ದಾರೆ.
ದಿನಸಿ ಸೇರಿದಂತೆ ಹೂ, ಹಣ್ಣು, ತರಕಾರಿ, ಮಾವಿನ ಸೊಪ್ಪು, ಬೇವಿನ ಸೊಪ್ಪು ಕೊಳ್ಳುವ ದೃಶ್ಯ ಎಲ್ಲೆಡೆ ಕಂಡು ಬಂತು. ಕೇವಲ ಮಾರುಕಟ್ಟೆಯಲ್ಲಿ ಅಲ್ಲದೇ ಕೆಲವು ವೃತ್ತಗಳಲ್ಲೂ ಬೇವಿನ ಸೊಪ್ಪು ಮತ್ತು ಮಾವಿನ ಸೊಪ್ಪಿನ ಮಾರಾಟ ಕಂಡು ಬಂದಿದೆ.
ಕೊರೊನಾದ 2ನೇ ಅಲೆಯ ಆತಂಕ ಸೃಷ್ಟಿಯಾಗಿದ್ದರೂ ಕೂಡ ಹಬ್ಬದ ಸಡಗರಕ್ಕೇನು ಕೊರತೆಯಾಗಿಲ್ಲ. ಈ ನಡುವೆ ಲಸಿಕೆಯ ಅಭಿಯಾನ ಕೂಡ ಹಬ್ಬದ ಜೊತೆ ಜೊತೆಗೆ ನಡೆಯುತ್ತಿದೆ.
ಬೆಚ್ಚಿಬೀಳಿಸುತ್ತೆ ಈ ಸುದ್ದಿ: ಬಳಸಿದ ʼಮಾಸ್ಕ್ʼಗಳಿಂದ ತಯಾರಾಗುತ್ತಿತ್ತು ಹಾಸಿಗೆ
ನಾಳೆ ಯುಗಾದಿ ಇರುವುದರಿಂದ ಖರೀದಿ ಜೋರಾಗಿಯೇ ನಡೆದಿದೆ. ಅದರಲ್ಲೂ ಮಾರುಕಟ್ಟೆ ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಹೆಚ್ಚು ಜನ ಸೇರಿರುವುದು ಕಂಡುಬಂದಿದೆ. ಎಲ್ಲಾ ವೃತ್ತಗಳಲ್ಲಿಯೂ ಮಾವಿನ ಸೊಪ್ಪು, ಬೇವಿನಸೊಪ್ಪು, ಹೂವು ಹಣ್ಣುಗಳ ಖರೀದಿಗೆ ಜನ ಮುಗಿಬಿದ್ದಿರುವ ದೃಶ್ಯ ಕಂಡು ಬಂದಿದೆ.