alex Certify ಬೆಚ್ಚಿಬೀಳಿಸುತ್ತೆ ಈ ಸುದ್ದಿ: ಬಳಸಿದ ʼಮಾಸ್ಕ್ʼ​​ಗಳಿಂದ ತಯಾರಾಗುತ್ತಿತ್ತು ಹಾಸಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ಈ ಸುದ್ದಿ: ಬಳಸಿದ ʼಮಾಸ್ಕ್ʼ​​ಗಳಿಂದ ತಯಾರಾಗುತ್ತಿತ್ತು ಹಾಸಿಗೆ

ಹಾಸಿಗೆಗಳನ್ನ ಹತ್ತಿಯಿಂದ ತಯಾರು ಮಾಡ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಅಂಗಡಿಯಿಂದ ಹಾಸಿಗೆಯನ್ನ ತಂದಮೇಲೆ ಒಳಗೆ ಏನಿದೆ ಅಂತಾ ಪರಿಶೀಲನೆ ಮಾಡೋ ಗೋಜಿಗೆ ಯಾರ್​ ತಾನೇ ಹೋಗ್ತಾರೆ. ಆದರೆ ಮಹಾರಾಷ್ಟ್ರದ ಜಲಗಾಂವ್​ ಜಿಲ್ಲೆಯಲ್ಲಿ ನಡೆದ ಪ್ರಕರಣವೊಂದನ್ನ ನೋಡ್ತಿದ್ರೆ ಹೊಸ ಹಾಸಿಗೆಗಳನ್ನ ಹರಿದು ಒಳಗೆ ಏನಿದೆ ಎಂದು ನೋಡಬೇಕು ಅಂತಾ ಎನಿಸದೇ ಇರದು.

ಹಾಸಿಗೆ ತಯಾರಕ ಅಂಗಡಿಯೊಂದರಲ್ಲಿ ಹತ್ತಿಗಳನ್ನ ಹಾಕಿ ಹಾಸಿಗೆ ತಯಾರು ಮಾಡೋದ್ರ ಬದಲು ಬಳಕೆ ಮಾಡಿ ಬಿಸಾಡಿದ ಮಾಸ್ಕ್​​ಗಳನ್ನ ಹಾಕಲಾಗಿದೆ. ಈ ಸಂಬಂಧ ಅಂಗಡಿ ಮಾಲೀಕನ ವಿರುದ್ಧ ಪೊಲೀಸರು ಕೇಸ್​ ದಾಖಲಿಸಿದ್ದಾರೆ. ಹಾಗೂ ಈ ಕಚ್ಚಾ ವಸ್ತುಗಳನ್ನ ನಾಶ ಮಾಡಿದ್ದಾರೆ.

ಕುಸುಂಬಾ ಜಿಲ್ಲೆಯ ಹಾಸಿಗೆ ತಯಾರಕ ಕಾರ್ಖಾನೆಗೆ ಭೇಟಿ ನೀಡಿದ್ದ ವೇಳೆ ಹಾಸಿಗೆಯ ಒಳಗೆ ಬಳಕೆ ಮಾಡಿ ಬಿಟ್ಟ ಮಾಸ್ಕ್​​ಗಳನ್ನ ತುಂಬಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ಹೆಚ್ಚುವರಿ ಸೂಪರಿಟೆಂಡೆಂಟ್​​​ ಪೊಲೀಸ್​​ ಚಂದ್ರಕಾಂತ್​ ಗವಾಲಿ ಮಾಹಿತಿ ನೀಡಿದ್ರು.

ಕಾರ್ಖಾನೆ ಮಾಲೀಕ ಅಮ್ಜದ್​​ ಅಹಮದ್​​ ಮನ್ಸೂರಿ ವಿರುದ್ಧ ಕೇಸ್​ ದಾಖಲಾಗಿದೆ. ಈ ದಂಧೆಯಲ್ಲಿ ಇನ್ನೂ ಯಾರ್ಯಾರು ಇದಾರೆ ಅನ್ನೋದ್ರ ಬಗ್ಗೆ ತನಿಖೆ ಮುಂದುವರಿದೆ ಎಂದು ಗವಾಲಿ ಹೇಳಿದ್ದಾರೆ.

ದೇಶದಲ್ಲಿ ಮಾಸ್ಕ್​ ಉತ್ಪಾದನೆ ಪ್ರಮಾಣ ಮಾರ್ಚ್​ 2020ರಿಂದ ದಿನಕ್ಕೆ 1.5 ಕೋಟಿ ಯುನಿಟ್​ ಸಾಮರ್ಥ್ಯಕ್ಕೆ ಏರಿಕೆ ಕಂಡಿದೆ. ಇದರಿಂದ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಗೆ ಹೊರೆ ಹೆಚ್ಚಾಗಿದೆ. ಕಳೆದ ವರ್ಷ ಜೂನ್​​ನಿಂದ ಸೆಪ್ಟೆಂಬರ್​ವರೆಗೆ ಕೊರೊನಾ ಸಂಬಂಧಿ ವೈದ್ಯಕೀಯ ತ್ಯಾಜ್ಯದ ಪ್ರಮಾಣ ಬರೋಬ್ಬರಿ 18 ಸಾವಿರ ಟನ್​ ಆಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.‌

hiskt6nk

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...