alex Certify ಕೊರೊನಾ ಸಂಕಷ್ಟದ ನಡುವೆಯೂ ನಡೆದಿದೆ ಬೆಚ್ಚಿಬೀಳಿಸುವ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟದ ನಡುವೆಯೂ ನಡೆದಿದೆ ಬೆಚ್ಚಿಬೀಳಿಸುವ ಘಟನೆ

ದೇಶದ ಜನತೆ ಈಗ ಕೊರೊನಾ ಮಹಾಮಾರಿಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಸೋಂಕು ಒಬ್ಬರಿಂದ ನೂರಾರು ಮಂದಿಗೆ ವ್ಯಾಪಿಸುವ ಕಾರಣ ಹೊರಗೆ ಹೋಗಲೂ ಭಯ ಪಡುವಂತಾಗಿದೆ. ಇದರ ಮಧ್ಯೆಯೂ ನಡೆದಿರುವ ಘಟನೆಯೊಂದು ಬೆಚ್ಚಿಬೀಳಿಸುವಂತೆ ಮಾಡಿದೆ.

ವಿಧವೆ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಮಗುವನ್ನು ತಾಲೂಕು ಆಸ್ಪತ್ರೆಯ ಪುರುಷ ನರ್ಸ್ ಸಹಕಾರದಿಂದ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಹೊನ್ನಾಳಿಯಲ್ಲಿ ನಡೆದಿದೆ. ಇದೀಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ತನಗೆ ಮಗುವಾದ ಕಾರಣ ಅದನ್ನು ಸಾಕಲು ವಿಧವೆ ಮಹಿಳೆ ಹಿಂಜರಿದಿದ್ದು, ಈ ಅವಕಾಶವನ್ನು ಬಳಸಿಕೊಂಡ ಆಸ್ಪತ್ರೆಯ ಪುರುಷ ನರ್ಸ್ ಮಹಿಳೆಗೆ ಒಂದಷ್ಟು ಹಣ ನೀಡಿ ಬಳಿಕ ಮತ್ತೊಬ್ಬರಿಗೆ ಇದನ್ನು ಮಾರಾಟ ಮಾಡಿದ್ದಾನೆಂದು ಹೇಳಲಾಗಿದೆ. ಇದೀಗ ಪ್ರಕರಣದ ಸಮಗ್ರ ತನಿಖೆ ನಡೆಸಲು ದಾವಣಗೆರೆ ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಆದೇಶಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...