alex Certify ‘ಕೊರೊನಾ’ ಬಗ್ಗೆ ಬೇಡ ಭಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಬಗ್ಗೆ ಬೇಡ ಭಯ…!

ದೇಶದಲ್ಲಿ ಆರ್ಭಟ ನಡೆಸುತ್ತಿರುವ ಕೊರೊನಾ ಮಹಾಮಾರಿ ರಾಜ್ಯದಲ್ಲೂ ಅಬ್ಬರಿಸುತ್ತಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನ ಜನತೆಯನ್ನು ಕೊರೊನಾ ಕಂಗೆಡಿಸಿದ್ದು, ಸೋಂಕಿತರ ಸಂಖ್ಯೆ ಕಳೆದ ಕೆಲ ದಿನಗಳಿಂದ ವಿಪರೀತವಾಗಿ ಹೆಚ್ಚಳವಾಗುತ್ತಿದೆ.

ಹೀಗಾಗಿ ಸಾರ್ವಜನಿಕರು ಭಯಭೀತರಾಗಿದ್ದು, ಆದರೆ ಕೊರೊನಾ ಎಲ್ಲರಿಗೂ ಮಾರಣಾಂತಿಕವಾಗಿ ಪರಿಣಮಿಸುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಈ ಮೊದಲೇ ಕಾಯಿಲೆಗಳಿಂದ ಬಳಲುತ್ತಿರುವವರು, ಹಿರಿಯ ನಾಗರಿಕರು ಹಾಗೂ ಮಕ್ಕಳು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಸೂಕ್ತ ಎಂದು ಹೇಳಲಾಗಿದೆ.

ಕೊರೊನಾ ಈಗಾಗಲೇ ಬಹಳಷ್ಟು ಜನರಿಗೆ ಅವರ ಅರಿವಿಗೇ ಬಾರದಂತೆ ಬಂದು ಹೋಗಿರಬಹುದು ಎಂದು ಸಹ ಹೇಳಲಾಗುತ್ತಿದೆ. ಏಕೆಂದರೆ ರಾಜ್ಯದಲ್ಲಿ ಈಗ ಪತ್ತೆಯಾಗಿರುವ ಬಹುತೇಕ ಪ್ರಕರಣಗಳಲ್ಲಿ ಸೋಂಕಿತರಿಗೆ ರೋಗ ಲಕ್ಷಣಗಳೇ ಇರಲಿಲ್ಲ. ಹೊರದೇಶ – ರಾಜ್ಯಗಳಿಂದ ಬಂದವರು ಹಾಗೂ ಸೋಂಕಿತರೊಂದಿಗೆ ಪ್ರಥಮ ದ್ವಿತೀಯ ಸಂಪರ್ಕ ಹೊಂದಿದವರಿಗೆ ಪರೀಕ್ಷೆ ಮಾಡಿದ ಬಳಿಕವೇ ಅವರಿಗೆ ಕೊರೊನಾ ಇರುವುದು ತಿಳಿದು ಬಂದಿದೆ.

ಈಗ ಕೊರೊನಾ ನಿಧಾನವಾಗಿ ಸಮುದಾಯಕ್ಕೆ ಹಬ್ಬುತ್ತಿರುವ ಸಾಧ್ಯತೆ ಇರುವುದರಿಂದ ಬಲು ಎಚ್ಚರಿಕೆಯಿಂದ ಇರುವುದು ಸೂಕ್ತ. ಕೊರೊನಾ ವೇಗವಾಗಿ ಹರಡುವುದರಿಂದ ಸಾರ್ವಜನಿಕರು ಅನಗತ್ಯವಾಗಿ ತಿರುಗಾಡುವುದು, ಮಾಸ್ಕ್ ಧರಿಸದಿರುವುದು ಹಾಗೂ ಸಾಮಾಜಿಕ ಅಂತರ ಕಾಪಾಡದಿರುವುದನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಒಂದೊಮ್ಮೆ ಹೊರಗೆ ಬರುವ ಅನಿವಾರ್ಯತೆ ಇದ್ದರೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಸೂಕ್ತ.

ಕೊರೊನಾದೊಂದಿಗೆ ಬದುಕುವುದು ಈಗ ಅನಿವಾರ್ಯವಾಗಿರುವ ಕಾರಣ ಅನಗತ್ಯವಾಗಿ ಭೀತಿಗೊಳಗಾಗದೇ ನಾವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇತರೆಯವರಿಗೆ ಇದು ಹರಡದಂತೆ ನೋಡಿಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...