alex Certify ‘ಕೊರೊನಾ’ ಆತಂಕದ ನಡುವೆ ಭರವಸೆ ಹುಟ್ಟಿಸುತ್ತೆ ಈ ಸುದ್ದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಆತಂಕದ ನಡುವೆ ಭರವಸೆ ಹುಟ್ಟಿಸುತ್ತೆ ಈ ಸುದ್ದಿ…!

Welcome To Daijiworld247.com

ಕಳೆದ ನಾಲ್ಕೈದು ತಿಂಗಳುಗಳಿಂದ ದೇಶದಲ್ಲಿ ಮಹಾಮಾರಿ ‘ಕೊರೊನಾ’ದ್ದೇ ಸುದ್ದಿ. ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಹೀಗಾಗಿ ಕೊರೊನಾ ಎಂದರೆ ಸಾರ್ವಜನಿಕರು ಭಯಪಡುವಂತಾಗಿದೆ.

ಇದರ ಮಧ್ಯೆಯೂ ಕೆಲವೊಂದು ಸುದ್ದಿಗಳು ಭರವಸೆ ಹುಟ್ಟಿಸುವಂತಿದ್ದು, ದೇಶದಲ್ಲಿ ಗುಣಮುಖರಾಗುವ ಕೊರೊನಾ ಸೋಂಕಿತರ ಪ್ರಮಾಣ ಶೇಕಡಾ 60 ಕ್ಕಿಂತಲೂ ಅಧಿಕ ಎನ್ನಲಾಗಿದೆ. ಇದರ ಮಧ್ಯೆ ಹೊರಬಿದ್ದಿರುವ ಮತ್ತೊಂದು ಸುದ್ದಿ ಖುಷಿ ನೀಡುತ್ತದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ 96 ವರ್ಷದ ವೃದ್ಧೆಯೊಬ್ಬರು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ, ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂಬ ವರದಿಗಳ ನಡುವೆ ನಡೆದಿರುವ ಈ ಬೆಳವಣಿಗೆ ನೆಮ್ಮದಿ ಮೂಡಿಸುವಂತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...