alex Certify ಕೈ ಮುಗಿಯಿರಿ ಕೊಲ್ಲೂರ ಸಿರಿದೇವಿ ಮೂಕಾಂಬಿಕೆಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈ ಮುಗಿಯಿರಿ ಕೊಲ್ಲೂರ ಸಿರಿದೇವಿ ಮೂಕಾಂಬಿಕೆಗೆ

ಕೊಲ್ಲೂರಿನ ಮೂಕಾಂಬಿಕಾ ದೇವಿ ದೇವಸ್ಥಾನವು ಭಾರತದ ಅತ್ಯಂತ ಪ್ರಸಿದ್ಧ ಪೂಜಾ ಸ್ಥಳಗಳ ಪೈಕಿ ಒಂದು.

ಪರ್ಣಿಕಾ ನದಿಯ ದಂಡೆಯಲ್ಲಿ ಕೊಡಚಾದ್ರಿ ಬೆಟ್ಟದಿಂದ ಆವೃತವಾದ ಪ್ರದೇಶದಲ್ಲಿ, ಸುಂದರ ಪ್ರದೇಶದಲ್ಲಿ ದೇಗುಲವಿದೆ. ಮಂಗಳೂರಿನಿಂದ 142 ಕಿ.ಮೀ.ಗಳಷ್ಟು ದೂರದಲ್ಲಿರುವ ಮೂಕಾಂಬಿಕೆಯ ದರ್ಶನಕ್ಕೆ ಪ್ರತಿವರ್ಷವೂ ಲಕ್ಷಗಟ್ಟಲೆ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ.

ಮಕ್ಕಳೇ ಕೊರೊನಾ ಲಸಿಕೆ ಭಯ ಬಿಡಿ…..! ಗಮನ ಸೆಳೆಯುತ್ತಿದೆ ಲಸಿಕಾ ಕೇಂದ್ರ

ಇಲ್ಲಿ ಆದಿ ಶಂಕರರು ಸುಮಾರು 1200 ವರ್ಷಗಳಷ್ಟು ಹಿಂದೆಯೇ ದೇವತೆಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ.

ಮೂಕಾಂಬಿಕಾ ದೇವಿಯ ದೇವಸ್ಥಾನವು ಕರ್ನಾಟಕದಲ್ಲಿನ ‘ಸಪ್ತ ಮುಕ್ತಿಸ್ಥಳ’ ತೀರ್ಥಯಾತ್ರಾ ತಾಣಗಳ ಪೈಕಿ ಒಂದೆನಿಸಿದೆ. ಶಿವ ಮತ್ತು ಶಕ್ತಿ ಈ ಇಬ್ಬರನ್ನೂ ಸಂಯೋಜಿಸಿರುವ ಜ್ಯೋತಿರ್ಲಿಂಗದ ಸ್ವರೂಪದಲ್ಲಿ ಇಲ್ಲಿನ ದೇವತೆಯು ನೆಲೆಸಿದ್ದಾಳೆ.

ಪ್ರತಿ ವರ್ಷ ನವೆಂಬರ್ನಲ್ಲಿ ನಡೆಯುವ ನವರಾತ್ರಿ ಆಚರಣೆ ಸಂದರ್ಭದಲ್ಲಿ, ದೇವಸ್ಥಾನವು ಭಕ್ತಸಾಗರದಿಂದ ತುಂಬಿರುತ್ತದೆ. ಆಗ ದೇವಿಯ ಸೊಬಗನ್ನು ನೋಡುವುದೇ ಒಂದು ಸೋಜಿಗ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...