alex Certify ಕೆಜಿ ರಾಗಿಯಲ್ಲಿ ಎಷ್ಟು ಕಾಳುಗಳಿರುತ್ತವೆ ಗೊತ್ತಾ…? ಎಣಿಕೆ ಮಾಡಿ ದಾಖಲೆ ಬರೆದ ವಿದ್ಯಾರ್ಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಜಿ ರಾಗಿಯಲ್ಲಿ ಎಷ್ಟು ಕಾಳುಗಳಿರುತ್ತವೆ ಗೊತ್ತಾ…? ಎಣಿಕೆ ಮಾಡಿ ದಾಖಲೆ ಬರೆದ ವಿದ್ಯಾರ್ಥಿ

ಸಣ್ಣ ಸಣ್ಣ ಕಾಳುಗಳಂತಿರುವ ರಾಗಿ ಆರೋಗ್ಯಕ್ಕೆ ಉತ್ತಮ. ಇಂತಹ ರಾಗಿ ಮೂಲಕ ವಿದ್ಯಾರ್ಥಿಯೊಬ್ಬ ದಾಖಲೆ ಬರೆದಿದ್ದಾರೆ. ಹೌದು, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸಚಿನ್ 1ಕೆಜಿ ರಾಗಿಯಲ್ಲಿ ಎಷ್ಟು ಕಾಳುಗಳಿರುತ್ತವೆ ಎಂಬುದನ್ನು ಎಣಿಕೆ ಮಾಡಿದ್ದು ಈ ಮೂಲಕ ಇಂಡಿಯಾಸ್ ವರ್ಲ್ಡ್ ರೆಕಾರ್ಡ್ ದಾಖಲೆಗೆ ಪಾತ್ರರಾಗಿದ್ದಾರೆ.

ಸಚಿನ್ ಶಿವಮೊಗ್ಗದಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದು, 1 ಕೆಜಿ ರಾಗಿ ಎಣಿಸಲು ಇವರು ಬರೋಬ್ಬರಿ 146 ಗಂಟೆ 30 ನಿಮಿಷ ಸಮಯ ತೆಗೆದುಕೊಂಡಿದ್ದಾರೆ. 1ಕೆಜಿಯಲ್ಲಿ 3,76,083 ಕಾಳುಗಳಿರುತ್ತವೆ ಎಂಬುದನ್ನು ಸಚಿನ್ ಕಂಡುಕೊಂಡಿದ್ದಾರೆ.

ಕೇಂದ್ರದಿಂದ ಮತ್ತೊಂದು ಬಿಗ್ ಶಾಕ್: ವಾಹನ ನವೀಕರಣ ಶುಲ್ಕ ಏರಿಕೆ ಸಾಧ್ಯತೆ

ಎಣಿಕೆ ವೇಳೆ ಸಚಿನ್ ಪ್ರತಿ 500 ರಾಗಿ ಕಾಳಿಗೆ ಒಂದು ಪಾಕೆಟ್ ಮಾಡಿದ್ದು, ಅವರ ರಾಗಿ ಎಣಿಕೆಯ ಈ ಸಾಧನೆ ತಿಳಿದ ಇಂಡಿಯಾಸ್ ವರ್ಲ್ಡ್ ರೆಕಾರ್ಡ್ ಫೌಂಡೇಶನ್ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಪ್ರಶಸ್ತಿ ಪತ್ರ ಮತ್ತು ಶೀಲ್ಡ್ ನೀಡಿ ಗೌರವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...