ಸಣ್ಣ ಸಣ್ಣ ಕಾಳುಗಳಂತಿರುವ ರಾಗಿ ಆರೋಗ್ಯಕ್ಕೆ ಉತ್ತಮ. ಇಂತಹ ರಾಗಿ ಮೂಲಕ ವಿದ್ಯಾರ್ಥಿಯೊಬ್ಬ ದಾಖಲೆ ಬರೆದಿದ್ದಾರೆ. ಹೌದು, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸಚಿನ್ 1ಕೆಜಿ ರಾಗಿಯಲ್ಲಿ ಎಷ್ಟು ಕಾಳುಗಳಿರುತ್ತವೆ ಎಂಬುದನ್ನು ಎಣಿಕೆ ಮಾಡಿದ್ದು ಈ ಮೂಲಕ ಇಂಡಿಯಾಸ್ ವರ್ಲ್ಡ್ ರೆಕಾರ್ಡ್ ದಾಖಲೆಗೆ ಪಾತ್ರರಾಗಿದ್ದಾರೆ.
ಸಚಿನ್ ಶಿವಮೊಗ್ಗದಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದು, 1 ಕೆಜಿ ರಾಗಿ ಎಣಿಸಲು ಇವರು ಬರೋಬ್ಬರಿ 146 ಗಂಟೆ 30 ನಿಮಿಷ ಸಮಯ ತೆಗೆದುಕೊಂಡಿದ್ದಾರೆ. 1ಕೆಜಿಯಲ್ಲಿ 3,76,083 ಕಾಳುಗಳಿರುತ್ತವೆ ಎಂಬುದನ್ನು ಸಚಿನ್ ಕಂಡುಕೊಂಡಿದ್ದಾರೆ.
ಕೇಂದ್ರದಿಂದ ಮತ್ತೊಂದು ಬಿಗ್ ಶಾಕ್: ವಾಹನ ನವೀಕರಣ ಶುಲ್ಕ ಏರಿಕೆ ಸಾಧ್ಯತೆ
ಎಣಿಕೆ ವೇಳೆ ಸಚಿನ್ ಪ್ರತಿ 500 ರಾಗಿ ಕಾಳಿಗೆ ಒಂದು ಪಾಕೆಟ್ ಮಾಡಿದ್ದು, ಅವರ ರಾಗಿ ಎಣಿಕೆಯ ಈ ಸಾಧನೆ ತಿಳಿದ ಇಂಡಿಯಾಸ್ ವರ್ಲ್ಡ್ ರೆಕಾರ್ಡ್ ಫೌಂಡೇಶನ್ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಪ್ರಶಸ್ತಿ ಪತ್ರ ಮತ್ತು ಶೀಲ್ಡ್ ನೀಡಿ ಗೌರವಿಸಿದೆ.