ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಶೀಘ್ರದಲ್ಲಿಯೇ ತಾನು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದು, ಇನ್ನು ಮುಂದೆ ನನ್ನದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವರ್ತೂರು ಪ್ರಕಾಶ್, ನಾನು ಎಂಎಲ್ಎ ಆಗಬೇಕು. ಹಾಗಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ಸಿದ್ದರಾಮಯ್ಯ ಏನು ಹೇಳ್ತಾರೋ ಅದನ್ನು ಮಾಡಲು ಸಿದ್ಧ. ಅವರು ಹೋಗುವ ದಾರಿಯಲ್ಲಿ ನಾನು ನಡೆಯುತ್ತೇನೆ. 10 ವರ್ಷ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ನಲ್ಲಿಯೂ ಇರಬೇಕು ಎಂಬುದು ನನ್ನ ಆಸೆ ಎಂದರು.
ನಕಲಿ ಚಾಲನಾ ಪರವಾನಗಿ ಪತ್ತೆ ಹಚ್ಚೋದು ಈಗ ಬಲು ಸುಲಭ
ಬಿಜೆಪಿ ಅಂದ್ರೆ ನನಗೆ ಮೊದಲಿನಿಂದ ಆಗುತ್ತಿರಲಿಲ್ಲ. ಆದರೆ ಬಿಜೆಪಿ ಸರ್ಕಾರದಲ್ಲಿಯೇ ನಾನು ಮಂತ್ರಿಯಾಗಿದ್ದು ನಿಜ. ಪಕ್ಷವೇ ಬೇರೆ, ಸರ್ಕಾರವೇ ಬೇರೆ. ನಾನು ಸ್ಥಾಪನೆ ಮಾಡಿದ ನಮ್ಮ ಕಾಂಗ್ರೆಸ್ ಈಗ ಇಲ್ಲ. ಇನ್ಮುಂದೆ ನನ್ನದೇನಿದ್ದರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಇನ್ನು 26 ತಿಂಗಳ ಬಳಿಕ ಚುನಾವಣೆ ಬರುತ್ತೆ. ನಾನು ಎಂಎಲ್ ಎ ಆಗಬೇಕು ಎಂದು ಹೇಳಿದರು.