alex Certify ನಕಲಿ ಚಾಲನಾ ಪರವಾನಗಿ ಪತ್ತೆ ಹಚ್ಚೋದು ಈಗ ಬಲು ಸುಲಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಲಿ ಚಾಲನಾ ಪರವಾನಗಿ ಪತ್ತೆ ಹಚ್ಚೋದು ಈಗ ಬಲು ಸುಲಭ

Image result for how-to-identify-fake-driving-license-see-the-entire-process-of-checking-here

ದೇಶದಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ನಂತರ ಸಂಚಾರ ನಿಯಮಗಳು ಕಠಿಣವಾಗಿವೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ, ಕಠಿಣ ಶಿಕ್ಷೆ ಮತ್ತು ಭಾರಿ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ನಿಮ್ಮ ಚಾಲನಾ ಪರವಾನಗಿ ನಕಲಿಯಾಗಿದ್ದರೆ ನೀವು ಕಷ್ಟ ಅನುಭವಿಸಬೇಕಾಗುತ್ತದೆ. ನಿಮ್ಮ ಚಾಲನಾ ಪರವಾನಗಿ ಅಸಲಿಯತ್ತಿನ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.

2019 ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ದೇಶದ ಪ್ರತಿ ಮೂರರಲ್ಲಿ ಒಂದು ಚಾಲನಾ ಪರವಾನಗಿ ನಕಲಿಯಾಗಿರುತ್ತದೆ. ಹೊಸ ಮೋಟಾರು ವಾಹನ ಕಾಯ್ದೆಯು ನಕಲಿ ಚಾಲನಾ ಪರವಾನಗಿ ತಡೆಯಲು ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದರು. ಹೊಸ ಮೋಟಾರು ವಾಹನ ಕಾಯ್ದೆಯ ಅನುಷ್ಠಾನದ ನಂತರ ಚಾಲನಾ ಪರವಾನಗಿಗಳನ್ನು ನೀಡುವ ವಿಧಾನಗಳು ಬಹಳಷ್ಟು ಬದಲಾಗಿವೆ. ಈಗ ಚಾಲನಾ ಪರವಾನಗಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಲ್ಲಿಯೇ ಚಾಲನಾ ಪರವಾನಗಿ ಅಸಲಿಯತ್ತು ತಿಳಿಯಬಹುದು.

ಎಲ್ಲಾ ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ಕಡ್ಡಾಯವಾಗಿ ಕಚೇರಿಗೆ ಹಾಜರಾಗಲು ಸಿಬ್ಬಂದಿ ಸಚಿವಾಲಯದಿಂದ ಸೂಚನೆ

ಮೊದಲು https://parivahan.gov.in/parivahan/#  ವೆಬ್‌ಸೈಟ್‌ಗೆ ಲಾಗ್ ಇನ್ ಆಗಬೇಕು. ಅಲ್ಲಿ ಆನ್‌ಲೈನ್ ಸೇವೆಯನ್ನು ಕ್ಲಿಕ್ ಮಾಡಬೇಕು. ಚಾಲನಾ ಪರವಾನಗಿ ಸಂಬಂಧಿತ ಸೇವೆಯ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಈ ಆಯ್ಕೆಯನ್ನು ಕ್ಲಿಕ್ ಮಾಡಿ ಅಲ್ಲಿ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರ ನಂತರ ನಿಮ್ಮ ಮುಂದೆ ಪ್ರತ್ಯೇಕ ವಿಂಡೋ ತೆರೆಯುತ್ತದೆ. ಅಲ್ಲಿ ಡ್ರೈವಿಂಗ್ ಲೈಸೆನ್ಸ್ ಆಯ್ಕೆ ಇರುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿದಾಗ, ಡಿಎಲ್ ಸೇವೆ ಆಯ್ಕೆ ಕಾಣಿಸುತ್ತದೆ. ಮುಂದುವರೆಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ಮತ್ತೊಂದು ವಿಂಡೋ ತೆರೆದುಕೊಳ್ಳುತ್ತದೆ. ಡಿಎಲ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಮತ್ತು ನಿಮ್ಮ ರಾಜ್ಯವನ್ನು ಮತ್ತೆ ಆಯ್ಕೆ ಮಾಡಬೇಕಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಮಾಡಿದ ನಂತರ ನಿಮ್ಮ ಡಿಎಲ್‌ ವಿವರಗಳು ಸಿಗುತ್ತವೆ. ಒಂದು ವೇಳೆ ಡಿಎಲ್ ವಿವರ ಬರದೆ ಹೋದಲ್ಲಿ ನಿಮ್ಮ ಡಿಎಲ್ ನಕಲಿ ಎಂಬುದು ಸ್ಪಷ್ಟ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...