ಕೊರೊನಾ ಮಾಹಾಮರಿ ಕೋಟ್ಯಾಂತರ ಜನಕ್ಕೆ ತಗುಲಿದ್ದು, ಚೇತರಿಕೆ ಕಾಣುತ್ತಿದ್ದಾರೆ. ಇದರ ಮಧ್ಯೆ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. ಐಸಿಎಂಆರ್ ದೇಶದಾದ್ಯಂತ ಸೀರೋ ಸರ್ವೆ ನಡೆಸಿತ್ತು. ಈ ಸರ್ವೆಯಲ್ಲಿ ಕೊರೋನಾ ಸೋಂಕು, ಪ್ರತಿರೋಧ, ತೀವ್ರತೆಗಳ ಬಗ್ಗೆ ತಿಳಿಯಬಹುದಾಗಿದೆ.
ಈ ಸರ್ವೆಯಿಂದ ಎಷ್ಟು ಜನರ ದೇಹದಲ್ಲಿ ಆಂಟಿಬಾಡಿ ಉತ್ಪತ್ತಿಯಾಗಿದೆ, ಎಷ್ಟು ಜನಕ್ಕೆ ಸೋಂಕು ಬಂದೋಗಿದೆ ಎಂಬುದನ್ನು ತಿಳಿಯಬಹುದಾಗಿದೆ. ಇನ್ನು ಕರ್ನಾಟಕದಲ್ಲಿ ಈ ಸರ್ವೆ ಹೇಳೋದೇನೆಂದರೆ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆಯಂತೆ. ಒಟ್ಟು 16% ಜನಕ್ಕೆ ಕೊರೊನಾ ಬಂದು ಹೋಗಿದೆ ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 16ರವರೆಗೆ ಈ ಸಮೀಕ್ಷೆ ಮಾಡಲಾಗಿದೆ. ಇನ್ನು ಎರಡನೇ ಹಂತದ ಸಮೀಕ್ಷೆಯನ್ನು ಮಾಡೋದಿಕ್ಕೆ ಚಿಂತನೆ ನಡೆದಿದೆ. ಡಿಸೆಂಬರ್ ಅಂತ್ಯ ಹಾಗೂ ಫೆಬ್ರವರಿ, ಮಾರ್ಚ್ ತಿಂಗಳುಗಳಲ್ಲಿ ಎರಡು ಹಂತದ ಸಮೀಕ್ಷೆ ನಡೆಸಬಹುದು.