ಶಿವಮೊಗ್ಗ: ಕರ್ತವ್ಯ ಬಿಟ್ಟು ಕೆಲ ಮೆಸ್ಕಾಂ ಸಿಬ್ಬಂದಿಗಳು ಮೋಜು-ಮಸ್ತಿಯಲ್ಲಿ ತೊಡಗಿದ್ದಲ್ಲದೇ ಬೈಕ್ ಸ್ಟಂಟ್ ಮಾಡುವ ಮೂಲಕ ಬೇಜವಾಬ್ದಾರಿ ಮೆರೆದಿದ್ದಾರೆ. ಕರ್ತವ್ಯಲೋಪ ಆರೋಪ ಹಿನ್ನೆಲೆಯಲ್ಲಿ ಇದೀಗ 6 ಮೆಸ್ಕಾಂ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.
ಅಂಜನಾಪುರ ಜಲಾಶಯದ ಬಳಿ 6 ಮೆಸ್ಕಾಂ ಸಿಬ್ಬಂದಿಗಳು ಕರ್ತವ್ಯ ಬಿಟ್ಟು ಮದ್ಯಪಾನ ಮಾಡಿ, ಕುಣಿದು ಕುಪ್ಪಳಿಸಿದ್ದಲ್ಲದೇ, ಬೈಕ್ ಸ್ಟಂಟ್ ಮಾಡುವ ಮೂಲಕ ಮೋಜಿನಲ್ಲಿ ತೊಡಗಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ 6 ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಕಾರ್ಯಪಾಲಕ ಇಂಜಿನಿಯರ್ ಆದೇಶ ಹೊರಡಿಸಿದ್ದಾರೆ. ಮೆಸ್ಕಾಂ ಸಿಬ್ಬಂದಿಗಳಾದ ಚಂದ್ರಶೇಖರ, ಎಸ್.ಎ.ರವಿ, ವಿನಯ್ ಕುಮಾರ್, ಸುರೇಶ್ ಎಲ್, ಮಂಜುನಾಥ್ ಕೆ.ಎಸ್, ಮಹೇಶ್ವರಪ್ಪ ಸಸ್ಪೆಂಡ್ ಆದ ಸಿಬ್ಬಂದಿಗಳು.