ಒಂದೇ ಕುಟುಂಬದ ಮೂರು ತಲೆಮಾರಿನ ಐವರು ಸದಸ್ಯರು ಸೋಮವಾರದಂದು ಜೈನ ಸನ್ಯಾಸ ದೀಕ್ಷೆ ಪಡೆದಿದ್ದಾರೆ. ದಾವಣಗೆರೆ ನಗರದ 75 ವರ್ಷದ ವರ್ಧಿಚಂದ್ ಜಿ, ಅವರ ಪುತ್ರ 47 ವರ್ಷದ ಅಶೋಕ್ ಕುಮಾರ್ ಜೈನ್, ವರ್ಧಿಚಂದ್ ಜಿ ಅವರ ಸೊಸೆ 45 ವರ್ಷದ ಭಾವನಾ ಅಶೋಕ್ ಜೈನ್, ಮೊಮ್ಮಕ್ಕಳಾದ 17ವರ್ಷದ ಪಕ್ಷಾಲ್ ಜೈನ್ ಹಾಗೂ 15 ವರ್ಷದ ಜಿನಾಂಕ್ ಕುಮಾರ್ ಜೈನ್ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ.
ಸನ್ಯಾಸ ದೀಕ್ಷೆ ಸ್ವೀಕರಿಸುವ ಮುನ್ನ ಇವರುಗಳೆಲ್ಲರೂ ತಮ್ಮ ಸ್ಥಿರಾಸ್ತಿಯನ್ನು ಬೇರೆಯವರ ಹೆಸರಿಗೆ ಬರೆದು ಕೊಟ್ಟಿದ್ದಾರೆ. ಜೊತೆಗೆ ಹಣ, ಆಭರಣ ಸೇರಿದಂತೆ ಹಲವು ವಸ್ತುಗಳನ್ನು ದಾನ ಮಾಡಲಾಗಿದೆ. ಸನ್ಯಾಸ ದೀಕ್ಷೆ ಪಡೆದ ಬಳಿಕ ಇವರುಗಳ ಹೆಸರುಗಳನ್ನು ಬದಲಿಸಲಾಗಿದೆ.
200 ರೂ. ಊಟಕ್ಕಾಗಿ 2 ಲಕ್ಷ ರೂಪಾಯಿ ದಂಡ ತೆತ್ತ ವೃದ್ದ
ದಾವಣಗೆರೆಯ ಆವರಗೆರೆಯಲ್ಲಿರುವ ನಾಗೇಶ್ವರ ಪಾರ್ಶ್ವ ಭೈರವ ಜೈನ ದೇವಾಲಯದಲ್ಲಿ ಸನ್ಯಾಸ ದೀಕ್ಷೆ ಸಮಾರಂಭ ನಡೆದಿದ್ದು, ಇದರಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಆಶೀರ್ವಾದ ಪಡೆದುಕೊಂಡಿದ್ದಾರೆ. ಆಚಾರ್ಯ ವಿಜಯ ಉದಯ್ ಪ್ರಭ್ ಸುರೀಶ್ವರ ಜೀ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಸನ್ಯಾಸ ದೀಕ್ಷೆ ನೀಡಿದ್ದಾರೆ.