alex Certify ಇಂದು ಸಂಜೆಯೇ ನಾನು ಮಂತ್ರಿಯಾಗಬಹುದು ಎಂದ MLC ಶಂಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಸಂಜೆಯೇ ನಾನು ಮಂತ್ರಿಯಾಗಬಹುದು ಎಂದ MLC ಶಂಕರ್

ಬೆಂಗಳೂರು: ಬಿಜೆಪಿ ಕಾರ್ಯಕಾರಿಣಿ ಮುಗಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಚಟುವಟಿಕೆ ಮತ್ತೆ ಗರಿಗೆದರಿದ್ದು, ಸಚಿವಾಕಾಂಕ್ಷಿಗಳು ಲಾಬಿ ತೀವ್ರಗೊಳಿಸಿದ್ದಾರೆ. ಈ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಎಂ ಎಲ್ ಸಿ ಆರ್.ಶಂಕರ್ ನಾನು ಇಂದು ಸಂಜೆಯೇ ಮಂತ್ರಿಯಾಗಬಹುದು ಹೇಳಲಾಗಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ಭೇಟಿ ಬಳಿಕ ಮಾತನಾಡಿದ ಆರ್.ಶಂಕರ್, ಇನ್ನೆರಡು ದಿನಗಳಲ್ಲಿ ನೀನು ಮಂತ್ರಿಯಾಗ್ತೀಯಾ ಎಂದು ಸಿಎಂ ಹೇಳಿದ್ದಾರೆ. ಈಗಾಗಲೇ ಸಂಪುಟ ವಿಸ್ತರಣೆ ಸಾಕಷ್ಟು ತಡವಾಗಿದೆ. ಸದ್ಯ ಸಂಪುಟ ವಿಸ್ತರಣೆ ಕಾಲ ಕೂಡಿ ಬಂದಿದೆ. ಹಾಗಾಗಿ ಇಂದು ಸಂಜೆಯೆ ನಾನು ಮಂತ್ರಿಯಾದರೂ ಆಗಬಹುದು ಎಂದರು.

ಎಂದಿನಂತೆ ಇಂದು ಕೂಡ ಸಿಎಂ ಬಿ.ಎಸ್.ವೈ ಅವರನ್ನು ಭೇಟಿಯಾಗಿದ್ದೇನೆ ಹೊರತು ಯಾವುದೇ ಒತ್ತಡ ಹೇರುವ ನಿಟ್ಟಿನಲ್ಲಿ ಭೇಟಿಯಾಗಿಲ್ಲ ಎಂದು ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...