ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗಿದೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ನೀಡಿದ ದೂರು ಆಧರಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇದೀಗ ಮಾಜಿ ಸಚಿವರಿಗೆ ಬಂಧನ ಭೀತಿ ಎದುರಾಗಿದೆ.
ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ, ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಕೆಲಸ ಕೊಡಿಸದೇ ವಂಚನೆ, ಜೀವ ಬೆದರಿಕೆ, ವಿಡಿಯೋ ಕಾಲ್ ಮಾಡಿ ಅಶ್ಲೀಲ ಮಾತುಗಳನ್ನಾಡಿದ್ದಾಗಿ ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದಳು. ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ರಮೇಶ್ ಜಾರಕಿಹೊಳಿ ವಿರುದ್ಧ 6 ಸೆಕ್ಷನ್ ಅಡಿ ಎಫ್ ಐ ಆರ್ ದಾಖಲಿಸಿದ್ದಾರೆ.
ನಾಳೆಯಿಂದ ಶುರು ಅಸಲಿ ಆಟ: ‘ಸಿಡಿ’ಯಲಿದೆ ರಹಸ್ಯ? ಗುಡುಗಿದ ರಮೇಶ ಜಾರಕಿಹೊಳಿ –ಪ್ರಯೋಗವಾಗಲಿದೆ ಬ್ರಹ್ಮಾಸ್ತ್ರ
ಎಫ್ಐಆರ್ ದಾಖಲಾಗಿರುವ ಸೆಕ್ಷನ್ ಗಳು:
* ಸೆಕ್ಷನ್ 376C – ಪ್ರಭಾವಿ ಹುದ್ದೆಯಲ್ಲಿದ್ದು ಲೈಂಗಿಕ ದೌರ್ಜನ್ಯ
* ಸೆಕ್ಷನ್ 354A – ಲೈಂಗಿಕ ದೌರ್ಜನ್ಯ ಶಿಕ್ಷೆ ಪ್ರಮಾಣ
* ಸೆಕ್ಷನ್ – 417 ವಂಚನೆ
* ಸೆಕ್ಷನ್ 504 – ಶಾಂತಿ ಕದಡಲು ಉದ್ದೇಶಪೂರ್ವಕ ಅಪಮಾನ
* ಸೆಕ್ಷನ್ 506 – ಜೀವ ಬೆದರಿಕೆ
* ಸೆಕ್ಷನ್ 67A – ಐಟಿ ಆಕ್ಟ್-ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ದೃಶ್ಯ ಹರಿಬಿಟ್ಟ ಕೃತ್ಯ – ಪ್ರಕರಣಗಳ ಅಡಿಯಲ್ಲಿ ಎಫ್ಐಆರ‍್ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಸಾಕ್ಷಾಧಾರ ಸಂಗ್ರಹಿಸುತ್ತಿದ್ದು, ರಮೇಶ್ ಜಾರಕಿಹೊಳಿ ಬಂಧನದ ಬಗ್ಗೆ ತನಿಖಾಧಿಕಾರಿಯೇ ನಿರ್ಧರಿಸಲಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಬಂಧನ ಭೀತಿಯಲ್ಲಿರುವ ರಮೇಶ್ ಜಾರಕಿಹೊಳಿ ನಿರೀಕ್ಷಣಾ ಜಾಮೀನು ಪಡೆಯುವ ಸಾಧ್ಯತೆ ದಟ್ಟವಾಗಿದೆ.