
ಎರೇಹಳ್ಳಿಯ ಗಿರೀಶ್ ಎಂಬವರ ತೋಟದಲ್ಲಿರುವ ಅಡಿಕೆ ಮರದಲ್ಲಿ ಶನಿವಾರದಂದು ಹೊಂಬಾಳೆ ಮೂಡಿದ್ದು, ಇದು ನೋಡಲು ಥೇಟ್ ಗಣೇಶನ ಮೂರ್ತಿಯಂತಿದೆ. ಇದರಿಂದ ಸಂತಸಗೊಂಡ ಗಿರೀಶ್ ಕುಟುಂಬ ಸಮೇತರಾಗಿ ಬಂದು ಪೂಜೆ ಸಲ್ಲಿಸಿದ್ದಾರೆ.
ನಾಲ್ಕೂವರೆ ವರ್ಷದ ಅಡಿಕೆ ಮರದಲ್ಲಿ ಮೂಡಿರುವ ಆಕೃತಿಗೆ ಗಣೇಶನ ಮುಖ ಹಾಗೂ ಸೊಂಡಿಲು ತರಹ ಇದ್ದು, ಈ ವಿಷಯ ಬಾಯಿಂದ ಬಾಯಿಗೆ ಹರಡುತ್ತಿದ್ದಂತೆ ಗ್ರಾಮಸ್ಥರು ತೋಟಕ್ಕೆ ಆಗಮಿಸಿ ಇದನ್ನು ವೀಕ್ಷಿಸಿ ಭಕ್ತಿಯಿಂದ ನಮಿಸುತ್ತಿದ್ದಾರೆ.