ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನ ಸಾಮಾನ್ಯರ ಪಾಲಿಗೆ ದೇವರಾಗಿದ್ದಾರೆ ಡಾ. ರಾಜು. ತಮ್ಮ ವಿಡಿಯೋಗಳ ಮೂಲಕ ಪ್ರತಿಯೊಂದು ವಿಚಾರವನ್ನು ಎಳೆಎಳೆಯಾಗಿ ಬಿಚ್ಚಿಡುವ ಮೂಲಕ ಕೊರೊನಾ ಕುರಿತ ಭಯವನ್ನು ಡಾ. ರಾಜು ಹೋಗಲಾಡಿಸುತ್ತಿದ್ದಾರೆ.
ʼವೈದ್ಯೋ ನಾರಾಯಣೋ ಹರಿಃʼ ಎಂಬ ಉಕ್ತಿಯನ್ನು ಡಾ. ರಾಜು ಅಕ್ಷರಶಃ ಅಳವಡಿಸಿಕೊಂಡಿದ್ದು, ಇವರ ಪ್ರತಿಯೊಂದು ವಿಡಿಯೋಗಳು ಜನ ಸಾಮಾನ್ಯರಲ್ಲಿ ಕೊರೊನಾ ಕುರಿತು ಅರಿವು ಮೂಡಿಸುವುದರ ಜೊತೆಗೆ ಭಯವನ್ನು ಹೋಗಲಾಡಿಸುತ್ತಿದೆ.
ಈಗಾಗಲೇ ಹಲವು ವಿಡಿಯೋಗಳನ್ನು ಬಿಡುಗಡೆ ಮಾಡಿರುವ ಡಾ. ರಾಜು, ಇದೀಗ ಕೊರೊನಾ ಪಾಸಿಟಿವ್ ಬಂದ ಮೇಲೆ ಮಾಡಬೇಕಾದ್ದೇನು ಎಂಬುದರ ಕುರಿತು ಸವಿವರವಾದ ಮಾಹಿತಿ ನೀಡಿದ್ದಾರೆ. ನೀವೂ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
https://www.facebook.com/106521611130177/videos/756103301620728