ಆರೋಗ್ಯ ಸೇತು ಆಪ್‌ನಿಂದ ಸೋಂಕಿತರ ಟ್ರೇಸಿಂಗ್ ಗೊತ್ತಾಗುವುದರ ಜೊತೆಗೆ ವೈಯಕ್ತಿಕ ಡಾಟಾ ಲೀಕ್ ಆಗುತ್ತದೆ ಎಂದು ಹೇಳಲಾಗುತ್ತಿತ್ತು. ಸರ್ಕಾರ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ಯಾರ ವೈಯಕ್ತಿಕ ಡಾಟವೂ ಲೀಕ್ ಆಗುವುದಿಲ್ಲ ಅಂತಾ. ಆದರೂ ಒಂದಿಷ್ಟು ಮಂದಿಗೆ ಈ ಬಗ್ಗೆ ಅನುಮಾನ ಇದ್ದೇ ಇದೆ. ಆದರೆ ಇದೀಗ ಈ ವೈಯಕ್ತಿಕ ಡಾಟಾವನ್ನು ಅಳಿಸಿ ಹಾಕಬಹುದಾಗಿದೆ.
ಹೌದು, ಇತ್ತೀಚೆಗೆ ಆರೋಗ್ಯ ಸೇತು ಆಪ್ ಅನ್ನು ಅಪ್ಡೇಟ್ ಮಾಡಲಾಗಿದೆ. ಅಪ್ಡೇಟ್ ಆಗಿ ಬಂದ ಈ ಆಪ್‌ನಲ್ಲಿ ನಿಮ್ಮ ಡೇಟಾವನ್ನು ಅಳಿಸು ಎಂಬ ವೈಶಿಷ್ಟ್ಯತೆಯನ್ನು ಸೇರಿಸಲಾಗಿದೆ. ಈ ಆಪ್ಷನ್ ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಅಭ್ಯವಿದ್ದು, ಮುಂದಿನ ದಿನಗಳಲ್ಲಿ ಐಒಎಸ್ ಬಳಕೆದಾರರೂ ಇದನ್ನು ಬಳಸಬಹುದು.
ನೀವು ಆಪ್ ಡೌನ್‌ಲೋಡ್ ಮಾಡಿ ಅಥವಾ ನವೀಕರಿಸಿದಾಗ ಅಲ್ಲಿನ ಸೆಟ್ಟಿಂಗ್ಸ್‌ಗೆ ಹೋಗಿ ಅದರಲ್ಲಿ ನನ್ನ ಖಾತೆಯನ್ನು ಅಳಿಸು ಆಯ್ಕೆಯನ್ನು ಆರಿಸಿಕೊಳ್ಳಿ. ನಂತರ ಅದರಲ್ಲಿ ಬರುವ ಸೂಚನೆಗಳನ್ನು ಪಾಲಿಸಿ. ಕೊನೆಯಲ್ಲಿ ಈ ಅಪ್ಲಿಕೇಶನ್ ನಿಮ್ಮ ಡೇಟಾವನ್ನು ಅಳಿಸುತ್ತದೆ.