alex Certify ಕರ್ನಾಟಕ ಅನ್ ​ಲಾಕ್​ 3.0: ಜುಲೈ 2ರಂದು ಕೋವಿಡ್​ ಉಸ್ತುವಾರಿ ಸಚಿವರೊಂದಿಗೆ ಸಿಎಂ ಮಹತ್ವದ ಸಭೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕ ಅನ್ ​ಲಾಕ್​ 3.0: ಜುಲೈ 2ರಂದು ಕೋವಿಡ್​ ಉಸ್ತುವಾರಿ ಸಚಿವರೊಂದಿಗೆ ಸಿಎಂ ಮಹತ್ವದ ಸಭೆ

ರಾಜ್ಯದಲ್ಲಿ ಕೊರೊನಾ ಕೇಸಿನ ಪ್ರಮಾಣ ಇಳಿಮುಖವಾಗ್ತಿರುವ ಹಿನ್ನೆಲೆಯಲ್ಲಿ ಜುಲೈ 5ನೇ ತಾರೀಖಿನಿಂದ ಅನ್​ಲಾಕ್​ 3.0 ರಾಜ್ಯದಲ್ಲಿ ಜಾರಿಯಾಗಲಿದೆ ಎಂದು ಹೇಳಲಾಗ್ತಿದೆ. ಅನ್​ಲಾಕ್​ 3.0ನ ಅಡಿಯಲ್ಲಿ ಜನತೆಗೆ ಇನ್ನಷ್ಟು ನಿಯಮಗಳು ಸಡಿಲಗೊಳ್ಳಲಿವೆ.

ಇನ್ನು ಅನ್​ಲಾಕ್​ 3.0 ಸಂಬಂಧ ಜುಲೈ 2ನೇ ತಾರೀಖಿನಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಿಗದಿಯಾಗಿದೆ. ಶುಕ್ರವಾರ ಸಂಜೆ 5:30ರ ಸುಮಾರಿಗೆ ನಡೆಯಲಿರುವ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಕೋವಿಡ್​ ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ಈ ಸಭೆಯಲ್ಲಿ ಯಾವ್ಯಾವ ನಿರ್ಬಂಧಗಳನ್ನ ಸಡಿಲಗೊಳಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ. ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಜುಲೈ 5ರಿಂದ ರಾಜ್ಯದಲ್ಲಿ ಮಾಲ್​ಗಳು, ಸಿನಿಮಾ ಥಿಯೇಟರ್​ ಹಾಗೂ ಪಬ್​-ಕ್ಲಬ್​ಗಳಿಗೆ ನಿರ್ಬಂಧಗಳಿಂದ ವಿನಾಯ್ತಿ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...