ರಾಜ್ಯದಲ್ಲಿ ಕೊರೊನಾ ಕೇಸಿನ ಪ್ರಮಾಣ ಇಳಿಮುಖವಾಗ್ತಿರುವ ಹಿನ್ನೆಲೆಯಲ್ಲಿ ಜುಲೈ 5ನೇ ತಾರೀಖಿನಿಂದ ಅನ್ಲಾಕ್ 3.0 ರಾಜ್ಯದಲ್ಲಿ ಜಾರಿಯಾಗಲಿದೆ ಎಂದು ಹೇಳಲಾಗ್ತಿದೆ. ಅನ್ಲಾಕ್ 3.0ನ ಅಡಿಯಲ್ಲಿ ಜನತೆಗೆ ಇನ್ನಷ್ಟು ನಿಯಮಗಳು ಸಡಿಲಗೊಳ್ಳಲಿವೆ.
ಇನ್ನು ಅನ್ಲಾಕ್ 3.0 ಸಂಬಂಧ ಜುಲೈ 2ನೇ ತಾರೀಖಿನಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಿಗದಿಯಾಗಿದೆ. ಶುಕ್ರವಾರ ಸಂಜೆ 5:30ರ ಸುಮಾರಿಗೆ ನಡೆಯಲಿರುವ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಕೋವಿಡ್ ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
ಈ ಸಭೆಯಲ್ಲಿ ಯಾವ್ಯಾವ ನಿರ್ಬಂಧಗಳನ್ನ ಸಡಿಲಗೊಳಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ. ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಜುಲೈ 5ರಿಂದ ರಾಜ್ಯದಲ್ಲಿ ಮಾಲ್ಗಳು, ಸಿನಿಮಾ ಥಿಯೇಟರ್ ಹಾಗೂ ಪಬ್-ಕ್ಲಬ್ಗಳಿಗೆ ನಿರ್ಬಂಧಗಳಿಂದ ವಿನಾಯ್ತಿ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.