2020ರಲ್ಲಿ ವಿದ್ಯಾರ್ಥಿಗಳಿಗೆ ಶಾಲೆಯಿಂದ ಮುಕ್ತಿ ಸಿಕ್ಕಷ್ಟು ಈ ಹಿಂದಿನ ಯಾವ ವರ್ಷದಲ್ಲೂ ಸಿಕ್ಕಿಲ್ಲ. ರಜಾ ಅವಧಿಯಲ್ಲಿ ಕೆಲ ಮಕ್ಕಳು ಆಟ ಆಡೋದ್ರಲ್ಲೇ ಮಗ್ನರಾಗಿದ್ರೆ ಇನ್ನೂ ಕೆಲವರು ಮೊಬೈಲ್, ಕಂಪ್ಯೂಟರ್ಗಳಲ್ಲಿ ಕಳೆದು ಹೋಗಿದ್ರು. ಆದರೆ ಲಾಕ್ಡೌನ್ ಅವಧಿಯಲ್ಲಿ ಬೆಳಗಾವಿಯ 15 ವರ್ಷದ ಬಾಲಕ ಅತ್ಯಂತ ಚೆನ್ನಾಗಿ ಬಳಸಿಕೊಂಡಿದ್ದಾನೆ.
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ 10ನೇ ತರಗತಿ ವಿದ್ಯಾರ್ಥಿ ಪ್ರಥಮೇಶ ಸುತಾರಾ ಎಂಬಾತ ಎಲೆಕ್ಟ್ರಿಕ್ ಬೈಕ್ ಒಂದನ್ನ ಆವಿಷ್ಕಾರ ಮಾಡಿದ್ದಾನೆ. ಈ ಬೈಕ್ನಲ್ಲಿರುವ ಬ್ಯಾಟರಿಯನ್ನ ಒಂದು ಬಾರಿಗೆ ಚಾರ್ಜ್ ಮಾಡಿದ್ರೆ ಅದು 40 ಕಿಲೋಮೀಟರ್ವರೆಗೆ ಓಡಲಿದೆ.
ಲಾಕ್ಡೌನ್ ಅವಧಿಯಲ್ಲಿ ಸುಮ್ಮನೇ ಮನೆಯಲ್ಲಿ ಕೂತು ಕಾಲಹರಣ ಮಾಡೋದನ್ನ ಬಿಟ್ಟು ಏನಾದರೂ ಉಪಯೋಗಕಾರಿ ಕೆಲಸ ಮಾಡಬೇಕು ಎಂದು ನಿರ್ಧರಿಸಿದ ಪ್ರಥಮೇಶ ತನ್ನ ಪೋಷಕರ ಬಳಿ ಎಲೆಕ್ಟ್ರಿಕ್ ಬೈಕ್ ಸಿದ್ಧಪಡಿಸಲಿದ್ದೇನೆ ಎಂದು ಹೇಳಿದ್ದಾನೆ. ಈತನ ತಂದೆ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದು ತನ್ನ ಮಗನ ಅನ್ವೇಷಣೆಗೆ ಪ್ರೋತ್ಸಾಹ ನೀಡಿದ್ದಾರೆ.
ಬೈಕ್ನ ಬಿಡಿ ಭಾಗಗಳು ಹಾಗೂ 48 ವೋಲ್ಟೇಜ್ನ ಲಿಡ್ ಆಸಿಡ್ ಬ್ಯಾಟರಿ, 48 ವೋಲ್ಟೇಜ್ನ ಮೋಟಾರ್ ಹಾಗೂ 750 ವಾಟ್ ಸಾಮರ್ಥ್ಯದ ಮೋಟಾರ್ಗಳನ್ನ ಬಳಸಿ ಪ್ರಥಮೇಶ ಈ ಬೈಕ್ ಸಿದ್ಧಪಡಿಸಿದ್ದಾನೆ. ಸಂಪೂರ್ಣವಾಗಿ ಈ ಬೈಕ್ನ್ನು ತಯಾರಿಸಲು ಪ್ರಥಮೇಶ 25 ಸಾವಿರ ರೂಪಾಯಿ ವ್ಯಯಿಸಿದ್ದಾನೆ.