ಕೋವಿಡ್ 19 ಬಂದಾಗಿನಿಂದ ಜನತೆಗೆ ಪಿಪಿಇ ಕಿಟ್ಗಳು ಪರಿಚಿತವಾಗಿದೆ.
ಧಾರವಾಡದಲ್ಲಿ ಇದೇ ಪಿಪಿಇ ಕಿಟ್ ಧರಿಸಿ ಬಂದ ಕಳ್ಳರ ಗುಂಪು ಬ್ಯಾಂಕ್ ಕೊಳ್ಳೆ ಹೊಡೆದ ಆಶ್ಚರ್ಯಕರ ಘಟನೆಯು ವರದಿಯಾಗಿದೆ.
ಬ್ಯಾಂಕ್ ಗೋಡೆಗೆ ರಂಧ್ರ ಕೊರೆದ ಕಳ್ಳರು ಆ ರಂಧ್ರದ ಮೂಲಕ ಬ್ಯಾಂಕ್ನ ಒಳಗೆ ನುಗ್ಗಿದ್ದಾರೆ. ಲಾಕರ್ಗಳನ್ನು ಒಡೆಯಲು ಕಳ್ಳರು ಗ್ಯಾಸ್ ಕಟರ್ ಬಳಕೆ ಮಾಡಿದ್ದಾರೆ. ಕಳ್ಳತನದ ಸಂಪೂರ್ಣ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.