alex Certify ಫೆಬ್ರವರಿ ವೇಳೆಗೆ ಕರ್ನಾಟಕದಲ್ಲಿ ಹೆಚ್ಚಾಗಲಿದೆ ಆಸ್ಪತ್ರೆಗೆ ದಾಖಲಾಗುವ ಕೊರೋನಾ ಸೋಂಕಿತರ ಸಂಖ್ಯೆ..! ತಜ್ಞರ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆಬ್ರವರಿ ವೇಳೆಗೆ ಕರ್ನಾಟಕದಲ್ಲಿ ಹೆಚ್ಚಾಗಲಿದೆ ಆಸ್ಪತ್ರೆಗೆ ದಾಖಲಾಗುವ ಕೊರೋನಾ ಸೋಂಕಿತರ ಸಂಖ್ಯೆ..! ತಜ್ಞರ ಎಚ್ಚರಿಕೆ

ಭಾರತದಲ್ಲಿ ಕೊರೋನಾದ ಹೊಸ ಅಲೆ ಶುರುವಾಗಿದೆ.‌ ದೇಶದ ಭಾಗಶಃ ಭಾಗಗಳಲ್ಲಿ ದಿನಕ್ಕೆ ಹತ್ತು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಅದ್ರಲ್ಲೂ ಕರ್ನಾಟಕದಲ್ಲಿ ಬುಧವಾರದಂದು 21 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಈ ಅಂಕಿ ಸಂಖ್ಯೆಗಳನ್ನ ನೋಡುವುದಾದರೆ ಕರ್ನಾಟಕದಲ್ಲಿ ಜನವರಿ ಅಂತ್ಯದೊಳಗೆ ಅಥವಾ ಫೆಬ್ರವರಿ ಶುರುವಿನಲ್ಲಿ 20,000 ದಿಂದ 70,000 ಕೊರೋನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗಬಹುದು ಎಂದು ಐಎಸ್ಐ(ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್) ಮತ್ತು ಐಐಎಸ್(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ನ ತಜ್ಞರು ಎಚ್ಚರಿಸಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಫೆಬ್ರವರಿ 2ನೇ ತಾರೀಖಿನೊಳಗೆ, 1000 ದಿಂದ 3000 ಐಸಿಯು ಬೆಡ್ ಗಳ ಅವಶ್ಯಕತೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಸರ್ಕಾರದ ವೆಬ್ಸೈಟ್ ನಲ್ಲಿ, ಕರ್ನಾಟಕದ ಖಾಸಗಿ ವಲಯದಲ್ಲಿ 1.4 ಲಕ್ಷ ಹಾಸಿಗೆಗಳಿವೆ ಎಂಬ ಮಾಹಿತಿ ಲಭ್ಯವಿದೆ. ಈ ವರದಿಗಳನ್ನ ತಳ್ಳಿ ಹಾಕಿರುವ,‌ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ​​(PHANA) ಅಧ್ಯಕ್ಷ ಡಾ. ಎಚ್.ಎಂ. ಪ್ರಸನ್ನ ‘ರಾಜ್ಯದ ಖಾಸಗಿ ವಲಯದಲ್ಲಿ ವರದಿಯಾಗುತ್ತಿರುವಂತೆ 1.4 ಲಕ್ಷ ಹಾಸಿಗೆಗಳಿಲ್ಲ ಎಂದಿದ್ದಾರೆ.

ಎರಡನೇ ಅಲೆ ಪ್ರಾರಂಭವಾದಾಗ ನಾವು ಪರಿಶೀಲಿಸಿದ್ದೇವೆ 66,000 ಹಾಸಿಗೆಗಳು ಮಾತ್ರ ಇದ್ದವು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪೋರ್ಟಲ್ ನಲ್ಲಿ ಇದು ಯಾವಾಗ ಹೆಚ್ಚಾಯಿತು ಎಂಬುದು ನಮಗೆ ತಿಳಿದಿಲ್ಲ. ಬಹುಶಃ ಸರ್ಕಾರವು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹಾಸಿಗೆಗಳನ್ನು ಇದೇ ಲಿಸ್ಟ್ ನಲ್ಲಿ ಸೇರಿಸಿರಬಹುದು ಎಂದಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಸಂಖ್ಯೆಯನ್ನು ಅಂದಾಜು ಮಾಡಿದ ಅವರು, ಕರ್ನಾಟಕದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಹೊರತುಪಡಿಸಿ ಸುಮಾರು 6,500 ಖಾಸಗಿ ಆಸ್ಪತ್ರೆಗಳಿವೆ. ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟಾರೆಯಾಗಿ 70,000 ಹಾಸಿಗೆಗಳಿವೆ, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಹಾಸಿಗೆಗಳಿರುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದ್ದಾರೆ.

ಆರೋಗ್ಯ ಕಮಿಷನರ್ ಡಿ ರಂದೀಪ್ ಮಾಹಿತಿ ಪ್ರಕಾರ, ಈ ಸಂಖ್ಯೆಯು ಸರ್ಕಾರದ ನಿರ್ದೇಶನಗಳ ಪ್ರಕಾರ ಕೋವಿಡ್‌ಗಾಗಿ ನಿಯೋಜಿಸಲಾದ ಹಾಸಿಗೆಗಳದ್ದು, ಒಟ್ಟು ಹಾಸಿಗೆಗಳದ್ದಲ್ಲ. ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ 28,283 ವಯಸ್ಕರ ಹಾಸಿಗೆಗಳು (ಸಾಮಾನ್ಯ, O2, HDU, ICU, ವೆಂಟಿಲೇಟರ್) ಮತ್ತು 3,466 ಮಕ್ಕಳ ಹಾಸಿಗೆಗಳಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...