ಐಎಎಸ್ ಅಧಿಕಾರಿಯೊಬ್ಬರು ಶಿವರಾಜ್ ಕುಮಾರ್ ಅವರ ‘ಟಗರು ಬಂತು ಟಗರು’ ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಫುಲ್ ವೈರಲ್ ಆಗಿದೆ.
ಹುಬ್ಬಳ್ಳಿ-ಧಾರವಾಡ ಮುನ್ಸಿಪಲ್ ಕೌನ್ಸಿಲ್ ಕಮೀಷನರ್ ಬಿ. ಗೋಪಾಲಕೃಷ್ಣ, ಇತ್ತೀಚೆಗೆ ಧಾರವಾಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಈ ವೇಳೆ ‘ಟಗರು ಬಂತು ಟಗರು’ ಹಾಡಿಗೆ ಸಕ್ಕತ್ತಾಗಿ ಡಾನ್ಸ್ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಗೋಪಾಲಕೃಷ್ಣ, ಬಾಲ್ಯದಿಂದಲೂ ತಮಗೆ ಡಾನ್ಸ್ ಬಗ್ಗೆ ಆಸಕ್ತಿ ಇತ್ತು. ಈಗಲೂ ಸಹ ಅದನ್ನು ಮುಂದುವರಿಸಿಕೊಂಡು ಬಂದಿದ್ದೇನೆ ಎಂದು ತಿಳಿಸಿದ್ದಾರೆ.
https://youtu.be/xuc1fLCaKB0