2023ರ ವೇಳೆಗೆ 63 ಲಕ್ಷಕ್ಕೂ ಅಧಿಕ ಮನೆಗಳಿಗೆ ನೀರಿನ ಸಂಪರ್ಕ ನೀಡುವ ಸಲುವಾಗಿ ರಾಜ್ಯ ಸರ್ಕಾರ 40 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಯೊಂದನ್ನ ಸಿದ್ಧಪಡಿಸಿದೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಈ ಯೋಜನೆಯನ್ನ ಹಣಕಾಸು ಇಲಾಖೆಗೆ ಕಳುಹಿಸಿಕೊಟ್ಟಿದ್ದು ಜಲ್ ಜೀವನ್ ಮಿಷನ್ ಅಡಿಯಲ್ಲಿ ಇದಕ್ಕೆ ಅನುಮೋದನೆ ನೀಡುವಂತೆ ಕೇಳಿದೆ. ಮನೆ ಮನೆಗೆ ಗಂಗಾ ಎಂಬ ಯೋಜನೆ ಇದಾಗಿದೆ. ಈ ಯೋಜನೆಯನ್ನ ವಾರದ ಆರಂಭದಲ್ಲಿ ಸಿಎಂ ಯಡಿಯೂರಪ್ಪ ಕೂಡ ಪರಿಶೀಲಿಸಿದ್ದರು.
ಅಮೆರಿಕ ಆಸ್ಪತ್ರೆಯಿಂದ ಹೊರಬಂದ ರಜನಿ: ಫೋಟೋ ವೈರಲ್
ಜಲ್ಜೀವನ್ ಮಿಷನ್ ಅಡಿಯಲ್ಲಿ ರಾಜ್ಯ ಸರ್ಕಾರ ಮನೆ ಮನೆಗೆ ನೀರಿನ ಸೌಕರ್ಯಗಳನ್ನ ಒದಗಿಸಲು ಇನ್ನಿಲ್ಲದ ಪ್ರಯತ್ನವನ್ನ ಮಾಡುತ್ತಲೇ ಇದೆ. 91.19 ಲಕ್ಷ ಗ್ರಾಮೀಣ ಕುಟುಂಬಗಳಲ್ಲಿ ಪ್ರಸ್ತುತ 28.15 ಲಕ್ಷ ಕುಟುಂಬಗಳಿಗೆ ಈ ಯೋಜನೆ ಲಾಭ ಸಿಗುವಂತೆ ಮಾಡೋದು ಸರ್ಕಾರದ ಮೊದಲ ಗುರಿಯಾಗಿದೆ. ಮುಂದಿನ ವರ್ಷಗಳಲ್ಲಿ ಉಳಿದ 63 ಲಕ್ಷ ಕುಟುಂಬಗಳಿಗೂ ಸವಲತ್ತನ್ನ ಒದಗಿಸುವ ಎಲ್ಲಾ ವ್ಯವಸ್ಥೆಯನ್ನ ಸರ್ಕಾರ ಮಾಡಲಿದೆ.