ಸಾಗರದ ಬಳಿ 21 ಎಕರೆಯಷ್ಟು ಜಮೀನನ್ನು ಖರೀದಿ ಮಾಡಿರುವ ಬೆಂಗಳೂರು ಮೂಲದ ಉದ್ಯಮಿ ಸುರೇಶ್ ಕುಮಾರ್, ಕಳೆದ ಹತ್ತು ವರ್ಷಗಳಲ್ಲಿ ಈ ಜಾಗದಲ್ಲಿ ಅರಣ್ಯದ ಕವಚ ಮೂಡುವಂತೆ ಮಾಡಿ ಹಸಿರಿನಿಂದ ನಳನಳಿಸುವಂತೆ ಮಾಡಿದ್ದಾರೆ.
ಪರಿಸರವಾದಿ ಅಖಿಲೇಶ್ ಚಿಪ್ಲಿ ಜೊತೆಗೂಡಿದ ಸುರೇಶ್ ಕುಮಾರ್ ತಮ್ಮ ಜಮೀನಿಗೆ ’ಉಷಾ ಕಿರಣ’ ಎಂದು ಹೆಸರಿಟ್ಟಿದ್ದಾರೆ. ಸೂರ್ಯನ ಕಿರಣಗಳೆಂಬ ಅರ್ಥ ಕೊಡುವ ಹೆಸರನ್ನು ಹೊಂದಿರುವ ಈ ಜಮೀನಿನಲ್ಲಿ ಆಯ್ದ ತಳಿಯ ವಿಶಿಷ್ಟ ಸಸ್ಯಗಳು ಇದ್ದು, ಇವುಗಳಲ್ಲಿ ಬಹುತೇಕ ಸ್ವಾಭಾವಿಕವಾಗಿ ಬೆಳೆಯುತ್ತಿವೆ.
ನಾಪತ್ತೆಯಾಗಿದ್ದ ಶ್ವಾನ ಮರಳಿ ಬಂದ ರೀತಿ ಕಂಡು ದಂಪತಿಗೆ ಅಚ್ಚರಿ
ಈ ಜಾಗವೀಗ ಪಶ್ಚಿಮ ಘಟ್ಟಗಳಲ್ಲಿ ಸಿಗುವ ವಿಶಿಷ್ಟ ತಳಿಯ ಸಸಿಗಳಿಂದ ತುಂಬಿದ್ದು ಪರಿಸರ ತಜ್ಞರು ಹಾಗೂ ವಿದ್ಯಾರ್ಥಿಗಳಿಗೆ ಅಧ್ಯಯನ ಕೇಂದ್ರವಾಗಿದೆ. ಪಶ್ಚಿಮ ಘಟ್ಟಗಳ ಸಸ್ಯವರ್ಗ ಹಾಗೂ ಪ್ರಾಣಿ ಸಂಕುಲದ ರಕ್ಷಣೆಗೆ ತಮ್ಮ ಕೈಲಾದ ಸೇವೆ ಮಾಡುವ ಉದ್ದೇಶದಿಂದ ಹೀಗೆ ಮಾಡಿರುವುದಾಗಿ ಸುರೇಶ್ ತಿಳಿಸುತ್ತಾರೆ.